ಫಿಜಿಯಲ್ಲಿ 6.7ರಷ್ಟು ತೀವ್ರತೆಯ ಭೂಕಂಪ

7

ಫಿಜಿಯಲ್ಲಿ 6.7ರಷ್ಟು ತೀವ್ರತೆಯ ಭೂಕಂಪ

Published:
Updated:

ಸುವಾ: ದಕ್ಷಿಣ ಪೆಸಿಫಿಕ್‌ನ ಫಿಜಿಯ ದ್ವೀಪ ಸಮೂಹದಲ್ಲಿ ಭಾನುವಾರ ರಾತ್ರಿ ಪ್ರಭಲ ಭೂಕಂಪ ಸಂಭವಿಸಿದೆ.

ಭೂಕಂಪನದ ತೀವ್ರತೆ 6.7ರಷ್ಟು ದಾಖಲಾಗಿದೆ ಎಂದು ಅಮೆರಿಕದ ಭೂ ವೈಜ್ಞಾನಿಕ ಸರ್ವೇಕ್ಷಣಾ ಇಲಾಖೆ ಹೇಳಿದೆ.

ಕಂಪನ ಭೂಮಿಯ ತುಂಬಾ ಆಳದಲ್ಲಿ ಉಂಟಾಗಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.

ರಾಜಧಾನಿ ಸುವಾದಿಂದ 283 ಕಿ.ಮೀ. ದೂರದಲ್ಲಿ ಹಾಗೂ 534 ಕಿ.ಮೀ. ಭೂಮಿಯ ಆಳದಲ್ಲಿ ಕಂಪನ ಕೇಂದ್ರೀಕೃತವಾಗಿತ್ತು ಎಂದು ಹೇಳಿದೆ.

ಸ್ಥಳೀಯರಿಗೆ ಭೂಮಿ ಕಂಪಿಸಿದ ಬಗ್ಗೆ ಅನುಭವವಾಗಿಲ್ಲ.  

ಭಾನುವಾರ ಬೆಳಿಗ್ಗೆ ಸಂಭವಿಸಿದ್ದ ಭೂಕಂಪದಿಂದ ಯಾವುದೇ ಸುನಾಮಿ ಅಪಾಯ ಎದುರಾಗುವುದಿಲ್ಲ ಪೆಸಿಫಿಕ್‌ ಸುನಾಮಿ ಎಚ್ಚರಿಕೆ ಕೇಂದ್ರ ತಿಳಿಸಿದೆ.

ಈ ಪ್ರದೇಶದಲ್ಲಿ ಸಾಗರದ ಆಳದಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿರುತ್ತವೆ. ಫಿಜಿ ‘ರಿಂಗ್‌ ಆಫ್‌ ಫೈರ್‌’ನಲ್ಲಿದ್ದು, ಪೆಸಿಫಿಕ್‌ ಸುತ್ತಲಿನ ಪ್ರದೇಶಲ್ಲಿ ಆಗಿಂದಾಗ್ಗೆ ಭೂಕಂಪನಗಳು ಮತ್ತು ಜ್ವಾಲಾಮುಖಿ ಸ್ಫೋಟಗಳು ಉಂಟಾಗುತ್ತಿರುತ್ತವೆ. ಎರಡು ತಿಂಗಳ ಹಿಂದೆಯಷ್ಟೇ 7.8ರಷ್ಟು ತೀವ್ರತೆಯ ಭೂಕಂಪನ ಉಂಟಾಗಿತ್ತು.
 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !