ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಚುನಾವಣೆ: ಭಾರತಕ್ಕೆ ಭರವಸೆ

Last Updated 31 ಮೇ 2020, 2:07 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೋವಿಡ್‌–19 ನಿರ್ಬಂಧಗಳಿಂದಾಗಿ ಹೊಸ ಮತದಾನ ವ್ಯವಸ್ಥೆಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಅಲ್ಲದ ಐದು ಸ್ಥಾನಗಳಿಗೆ ಮುಂದಿನ ತಿಂಗಳು ನಡೆಯಲಿರುವ ಚುನಾವಣೆಯಲ್ಲಿ ಭಾರತಕ್ಕೆ ಗೆಲುವು ನಿಚ್ಚಳವಾಗಿದೆ.

193 ಸದಸ್ಯರ ಸಾಮಾನ್ಯ ಸಭೆಯು ಶುಕ್ರವಾರ ‘ಕೋವಿಡ್‌–19 ಸಮಯದಲ್ಲಿ ಸಮಗ್ರ ಸಭೆಯಿಲ್ಲದೇ ರಹಸ್ಯ ಮತದಾನದ ಮೂಲಕ ಚುನವಣೆ ನಡೆಸುವ ವಿಧಾನ’ ಎನ್ನುವ ಶೀರ್ಷಿಕೆಯನ್ನು ಅಂಗೀಕರಿಸಿತು.2021–22ರ ಅವಧಿಗೆ 15 ರಾಷ್ಟ್ರಗಳ ಮಂಡಳಿಗೆ 5 ಕಾಯಂ ಸದಸ್ಯರ ಚುನಾವಣೆಯು ಜೂನ್ 17ಕ್ಕೆ ನಿಗದಿಪಡಿಸಲಾಗಿದೆ.

ಏಷ್ಯಾ ಫೆಸಿಫಿಕ್‌ನಿಂದ ಸ್ಪರ್ಧಿಸುತ್ತಿರುವ ಏಕೈಕ ರಾಷ್ಟ್ರ ಭಾರತವಾಗಿದ್ದು, ಗೆಲುವು ಖಚಿತವಾಗಿದೆ.

ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾ ಫೆಸಿಫಿಕ್ ಗುಂಪಿನ 55 ಸದಸ್ಯ ರಾಷ್ಟ್ರಗಳು ಕಳೆದ ಜೂನ್‌ನಲ್ಲಿ ಭಾರತದ ಉಮೇದುವಾರಿಕೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದವು. ಭಾರತದ ಅವಧಿ 2021ರ ಜನವರಿಯಿಂದ ಅರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT