15 ಸಾವಿರ ಕೆ.ಜಿ ಕಾಗದದ ಕಸ ಸಂಗ್ರಹಿಸಿದ ಬಾಲಕಿ ಎಮಿರೇಟ್ಸ್ ಪ್ರಶಸ್ತಿ

ಶುಕ್ರವಾರ, ಜೂನ್ 21, 2019
23 °C

15 ಸಾವಿರ ಕೆ.ಜಿ ಕಾಗದದ ಕಸ ಸಂಗ್ರಹಿಸಿದ ಬಾಲಕಿ ಎಮಿರೇಟ್ಸ್ ಪ್ರಶಸ್ತಿ

Published:
Updated:

ದುಬೈ: ಪರಿಸರ ಸ್ವಚ್ಛತೆಗಾಗಿ ಶ್ರಮಿಸಿದ ಭಾರತ ಮೂಲದ ವಿದ್ಯಾರ್ಥಿನಿ ನಿಯಾ ಟೋನಿ (8) ಎಮಿರೇಟ್ಸ್ ಪ್ರಶಸ್ತಿ ಪಡೆದಿದ್ದಾಳೆ. 

ಎಮಿರೇಟ್ಸ್ ಪರಿಸರ ಸಂಸ್ಥೆ ಆಯೋಜಿಸಿದ್ದ ತ್ಯಾಜ್ಯ ಮರುಬಳಕೆ ರಾಷ್ಟ್ರೀಯ ಅಭಿಯಾನದಲ್ಲಿ ನಿಯಾ 15,000 ಕೆ.ಜಿ ಕಾಗದದ ಕಸ ಸಂಗ್ರಹಿಸಿದ್ದಕ್ಕೆ ಈ ಗೌರವ ಸಿಕ್ಕಿದೆ. ಈಕೆ ಸ್ವಚ್ಛತಾ ಅಭಿಯಾನದಲ್ಲಿ ನಾಗರಿಕರಿಗೆ ಮಾದರಿಯಾಗಿದ್ದಾಳೆ ಎಂದು ಸ್ಥಳೀಯ ಸುದ್ದಿವಾಹಿನಿ ವರದಿ ಮಾಡಿದೆ. 

‘ಪ್ರತಿ ವಾರಕ್ಕೊಮ್ಮೆ ನಾನು ಎಲ್ಲ ಮನೆಗಳಿಗೆ ಹೋಗುತ್ತಿದ್ದೆ. ಜನರಿಗೆ ಬೇಡವಾದ ಅಥವಾ ಅವರು ಎಸೆಯಲು ಬಯಸುತ್ತಿದ್ದ ವೃತ್ತಪತ್ರಿಕೆಗಳು, ನಿಯತಕಾಲಿಕೆಗಳು ಮತ್ತು ಇತರ ಕಾಗದಗಳನ್ನು ಸಂಗ್ರಹಿಸಿದೆ. ಪ್ರತಿ ಮಕ್ಕಳು ಪರಿಸರ ಸ್ವಚ್ಛಗೊಳಿಸಲು ಶ್ರಮಿಸಿದರೆ ವೃದ್ಧಾಪ್ಯದಲ್ಲೂ ಹಸಿರಿನ ಭೂಮಿಯನ್ನು ಕಾಣಬಹುದು’ ಎಂದು ಅಭಿಪ್ರಾಯ ಪಟ್ಟಿದ್ದಾಳೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !