ಸೋಮವಾರ, ಅಕ್ಟೋಬರ್ 21, 2019
21 °C

ಉಪಾಹಾರದಲ್ಲಿ ಕೂದಲು, ಪತ್ನಿಯ ತಲೆ ಬೋಳಿಸಿದ ಪತಿ!

Published:
Updated:
prajavani

ಢಾಕಾ: ಉಪಾಹಾರದಲ್ಲಿ ಕೂದಲು ಕಾಣಿಸಿಕೊಂಡಿದ್ದರಿಂದ ಸಿಟ್ಟಿಗೆದ್ದ ಗಂಡ ತನ್ನ ಪತ್ನಿಯ ತಲೆಬೋಳಿಸಿದ ಘಟನೆ ಬಾಂಗ್ಲಾದೇಶದಲ್ಲಿ  ನಡೆದಿದೆ.

ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪ‍ಡಿಸಿ ಮಹಿಳಾ ಹಕ್ಕುಗಳ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ. 

ಜೋಯ್‌ಪುರಹತ್‌ ಎಂಬಲ್ಲಿ ನಡೆದ ಘಟನೆಯ ಬಗ್ಗೆ ಗ್ರಾಮಸ್ಥರು ದೂರು ನೀಡಿದ ಬಳಿಕ, ಆರೋಪಿ ಬಬ್ಲು ಮೊಂಡಲ್‌ (35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಾಲು ಮತ್ತು ಅನ್ನ ಸೇರಿಸಿ ತಯಾರಿಸಿದ ಉಪಾಹಾರದಲ್ಲಿ ಮನುಷ್ಯರ ಕೂದಲು ಕಾಣಿಸಿದಾಗ ಸಿಟ್ಟಿಗೆದ್ದ ಬಬ್ಲು, ಬ್ಲೇಡ್‌ ತೆಗೆದುಕೊಂಡು ಪತ್ನಿಯ ತಲೆಕೂದಲು ಬೋಳಿಸಿದ್ದಾನೆ ಎಂದು ಪೊಲೀಸ್‌ ಮುಖ್ಯಸ್ಥ ಶಹ್ರಿಯಾರ್‌ ಖಾನ್‌ ತಿಳಿಸಿದ್ದಾರೆ. 

Post Comments (+)