ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿಗೆ ಹೆಚ್ಚಿದ ಬೆಂಬಲ ರೇಣುಕಾ ವಿಶ್ವನಾಥನ್‌

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹ್ಯಾರಿಸ್‌ ಪುತ್ರ ನಲಪಾಡ್‌, ಉದ್ಯಮಿ ಪುತ್ರ ವಿದ್ವತ್‌ ಮೇಲೆ ಹಲ್ಲೆ ಮಾಡಿ ಬಂಧಿತನಾದ ಬಳಿಕ ಶಾಂತಿ ನಗರದ ಜನ ಭಯ ಬಿಟ್ಟು ತಮ್ಮ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ಬಗ್ಗೆ ಮಾತನಾಡಲಾರಂಭಿಸಿದ್ದಾರೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ರೇಣುಕಾ ವಿಶ್ವನಾಥನ್‌ ಹೇಳಿದ್ದಾರೆ.

‘ರೇಣುಕಾ ವಿಶ್ವನಾಥನ್ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದರೂ ದೆಹಲಿಯಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. 2008 ರಲ್ಲಿ ಆಗಿನ ರಾಷ್ಟ್ರಪತಿಯ ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದರು. ‘ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಕೃತ್ಯ ಖಂಡಿಸಿ ಆಮ್‌ ಆದ್ಮಿ ಪಕ್ಷವು ಕ್ಷೇತ್ರದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ನಲಪಾಡ್‌  ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಂಡಿತು. ಇದರಿಂದ ನಮ್ಮ ಬಗ್ಗೆ ಜನರಲ್ಲಿ ವಿಶ್ವಾಸ ಬಂದಿದೆ. ಆ ಬಳಿಕ ಪಕ್ಷಕ್ಕೆ ದೇಣಿಗೆ ನೀಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದು ರೇಣುಕಾ ವಿಶ್ವನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅರಸುಗೆ ಸಿಎಂ ಸಮ ಅಲ್ಲ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ದೇವರಾಜು ಅರಸು ಎಂದು ಅವರ ಅಭಿಮಾನಿ ವೃಂದ ಬಣ್ಣಿಸುತ್ತದೆ. ಆದರೆ, ಅರಸು ಮಾಡಿದ ಯಾವುದೇ ಕಾರ್ಯಗಳನ್ನು ಸಿದ್ದರಾಮಯ್ಯ ಮಾಡಿಲ್ಲ, ಅರಸು ಅವರಲ್ಲಿದ್ದ ಧೀಮಂತಿಕೆಯೂ ಇಲ್ಲ’ ಎಂದು ಕೆ.ಆರ್‌ಪುರ ಅಭ್ಯರ್ಥಿ ಲಿಂಗರಾಜ ಅರಸು ಹೇಳಿದರು.

ದೇವರಾಜ ಅರಸರ ಚಿಕ್ಕಮ್ಮನ ಮೊಮ್ಮಗ ಆಗಿರುವ ಲಿಂಗರಾಜ, ಜೆನಿಸಿಸ್‌ ಐಟಿ ಕಂಪೆನಿಯ ಸಹ ಸ್ಥಾಪಕರು. 2015 ರಲ್ಲಿ ಕನ್ನಮಂಗಲ ಗ್ರಾಮ ಪಂಚಾಯ್ತಿ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ರಾಜಕೀಯ ಪ್ರವೇಶಕ್ಕೆ ಮೊದಲು ಸ್ಥಳೀಯ ಮೂರು ಶಾಲೆಗಳನ್ನು ದತ್ತು ತೆಗೆದುಕೊಂಡು ಮಧ್ಯಾಹ್ನದ ಬಿಸಿಯೂಟ ಪೂರೈಸುತ್ತಿದ್ದರು.

‘ಕೆ.ಆರ್‌.ಪುರ ಕ್ಷೇತ್ರದಲ್ಲಿ ಬೈರತಿ ಬಸವರಾಜು ಪ್ರಬಲ ಅಭ್ಯರ್ಥಿ ಎಂಬುದು ನನಗೆ ಗೊತ್ತು. ನಾನು ಅರಸು ಮೊಮ್ಮಗ ಎಂಬುದು ಅವರಿಗೂ ಗೊತ್ತಿರುವುದರಿಂದ ನಮ್ಮ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗಿಲ್ಲ’ ಎಂದರು.

‘ದಲಿತರಿಗೆ ₹ 60,000 ಕೋಟಿ ಖರ್ಚು ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೆಲಸ ಆಗಿದ್ದು ಎಲ್ಲೂ ಕಾಣುವುದಿಲ್ಲ. ಹಣ ಎಲ್ಲಿಗೆ ಹೋಗಿದೆ’ ಎಂದು ಲಿಂಗರಾಜ ಅರಸು ಪ್ರಶ್ನಿಸಿದರು.

‘ಕಾಂಗ್ರೆಸ್‌ ಸಂಸ್ಕೃತಿ ನನಗಾಗದು. ಆದ್ದರಿಂದ ಕಾಂಗ್ರೆಸ್‌ ಸೇರಿಕೊಳ್ಳಲಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT