ಶುಕ್ರವಾರ, ಡಿಸೆಂಬರ್ 13, 2019
26 °C

ಭಾರತೀಯ ಸಂಜಾತ ಅಂಕುರ್‌ ಜೈನ್‌ಗೆ ಪ್ಯಾಕರ್ಡ್‌ ಫೆಲೋಶಿಪ್‌

ಪಿಟಿಐ Updated:

ಅಕ್ಷರ ಗಾತ್ರ : | |

ಹ್ಯೂಸ್ಟನ್‌: ಭಾರತ ಸಂಜಾತ ಶಿಕ್ಷಣ ತಜ್ಞ ಮತ್ತು ಜೀವಶಾಸ್ತ್ರಜ್ಞ ಅಂಕುರ್‌ ಜೈನ್‌ ಅವರಿಗೆ ಅಮೆರಿಕದ ಪ್ರತಿಷ್ಠಿತ ಪ್ಯಾಕರ್ಡ್‌ ಫೆಲೋಶಿಪ್‌ ಲಭಿಸಿದೆ. 

ಒಟ್ಟು 22 ಮಂದಿ ಈ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ವಿಜ್ಞಾನಿಗಳ ಸಂಶೋಧನೆಗೆ ನೆರವಾಗಲು 8.75 ಲಕ್ಷ ಡಾಲರ್‌) ( ₹6.28 ಕೋಟಿ) ಅನುದಾನ ಸಿಗಲಿದೆ. 

ಜೈನ್‌ ಅವರು ವೈಟ್‌ಹೆಡ್‌ ಇನ್‌ಸ್ಟಿಟ್ಯೂಟ್‌ನ ಬಯೋಮೆಡಿಕಲ್‌ ಸಂಶೋಧಕರಾಗಿದ್ದಾರೆ. ಮತ್ತು ಪ್ರತಿಷ್ಠಿತ ಮೆಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಜೀವಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಆರ್‌ಎನ್‌ಎ(ರೈಬೊ ನ್ಯೂಕ್ಲಿಯಿಕ್‌ ಆಮ್ಲ) ನರ ಸಂಬಂಧಿ ಕಾಯಿಲೆಗೆ ಹೇಗೆ ಕಾರಣವಾಗುತ್ತದೆ ಎಂಬ ವಿಷಯದ ಕುರಿತು ಇವರು ಸಂಶೋಧನೆ ನಡೆಸುತ್ತಿದ್ದಾರೆ. 

‘ನಮ್ಮ ಸಂಶೋಧನೆಯನ್ನು ಗುರುತಿಸಿ ಪ್ಯಾಕರ್ಡ್‌ ಫೌಂಡೇಶನ್‌ ಬೆಂಬಲ ನೀಡಿರುವುದಕ್ಕೆ ಕೃತಜ್ಞನಾಗಿದ್ದೇನೆ’ ಎಂದು ಅಂಕುರ್‌ ಜೈನ್‌ ತಿಳಿಸಿದ್ದಾರೆ. 

ಜೈನ್‌ ಅವರು 2007ರಲ್ಲಿ ಕರಗಪುರದಲ್ಲಿ ಬಯೋಟೆಕ್ನಾಲಜಿ ಮತ್ತು ಬಯೋಕೆಮಿಕಲ್‌ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಕಂಪ್ಯೂಟೇಷನಲ್ ಬಯೋಲಜಿ ಮತ್ತು ಬಯೋಫಿಸಿಕ್ಸ್‌ನಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು