ಭಾನುವಾರ, ಜೂನ್ 7, 2020
22 °C

ಕ್ವಾರಂಟೈನ್‌ ಆದೇಶ ಉಲ್ಲಂಘನೆ: ಭಾರತೀಯ ವ್ಯಕ್ತಿಗೆ ₹1.87 ಲಕ್ಷ ದಂಡ

ಪಿಟಿಐ Updated:

ಅಕ್ಷರ ಗಾತ್ರ : | |

ಸಿಂಗಪುರ : ಸ್ವಯಂ ಪ್ರತ್ಯೇಕವಾಗಿರುವ ಆದೇಶ ಉಲ್ಲಂಘಿಸಿದ ಭಾರತ ಮೂಲದ ವ್ಯಕ್ತಿಗೆ ₹ 1.87 ಲಕ್ಷ ದಂಡ ವಿಧಿಸಲಾಗಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.

ವರ್ದಿರೆಡ್ಡಿ ನಾಗೇಶ್ವರ ರೆಡ್ಡಿ (35) ಈ ಶಿಕ್ಷೆಗೆ ಗುರಿಯಾದವರು. ಫೆಬ್ರುವರಿ 16ರಿಂದ 25 ರವರೆಗೆ ಮನೆಯಲ್ಲಿ ಪ್ರತ್ಯೇಕವಾಗಿರುವಂತೆ ರೆಡ್ಡಿ ಅವರಿಗೆ ತಿಳಿಸಲಾಗಿತ್ತು. ಆದರೆ, ಅವರು ಫೆ. 24 ರಂದು ಅನುಮತಿ ಪಡೆಯದೆ ಹೊರಗೆ ಹೋಗಿದ್ದರು. 

ರೆಡ್ಡಿ ಅವರ ಸಹೋದ್ಯೋಗಿಯೊಬ್ಬರಿಗೆ ಸೋಂಕು ತಗುಲಿತ್ತು. ರೆಡ್ಡಿ ಅವರಿಗೆ ಸೋಂಕು ತಗುಲದಿರುವುದು ದೃಢಪಟ್ಟಿತ್ತು. ಆದರೆ, ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಕಾರಣ ಅವರನ್ನು ಪ್ರತ್ಯೇಕವಾಗಿರುವಂತೆ ತಿಳಿಸಲಾಗಿತ್ತು. 

ಇನ್ನೇನು ಕ್ವಾರಂಟೈನ್‌ ಅವಧಿ ಮುಗಿಯಲಿದೆ. ಕಚೇರಿಗೆ ಹೋಗಬೇಕು ಎಂಬ ಉತ್ಸಾಹದಲ್ಲಿ ಕೆಲವು ವಸ್ತುಗಳನ್ನು ಖರೀದಿಸಲು ಅವರು ಶಾಪಿಂಗ್‌ ಮಾಲ್‌ಗೆ ತೆರಳಿದ್ದರು ಎನ್ನಲಾಗಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು