ಹಫೀಜ್‌ ಪರ ಸಚಿವರ ಮಾತುಕತೆ ವಿಡಿಯೊ ಸೋರಿಕೆ

7

ಹಫೀಜ್‌ ಪರ ಸಚಿವರ ಮಾತುಕತೆ ವಿಡಿಯೊ ಸೋರಿಕೆ

Published:
Updated:

ಲಾಹೋರ್‌: ಮುಂಬೈ ದಾಳಿಯ ಸಂಚುಕೋರ ಹಫೀಜ್‌ ಸೈಯದ್‌ ಮತ್ತು ಆತನ ಪಕ್ಷದ ಪರವಾಗಿ ಪಾಕ್‌ ಸಚಿವ ಸಚಿವ ಶೆಹರ್ಯಾರ್ ಖಾನ್ ಅಫ್ರಿದಿ ಮಾತನಾಡಿರುವ ವಿಡಿಯೊ ಸೋರಿಕೆಯಾಗಿದೆ. 

ಹಫೀಜ್‌ ಸೈಯದ್‌ ಪ್ರಾರಂಭಿಸಿದ ಮಿನಿ ಮುಸ್ಲಿಂ ಲೀಗ್‌ ಪಕ್ಷದ ನಾಯಕರ ಜೊತೆ ಸಚಿವರು ಮಾತುಕತೆ ನಡೆಸಿದ್ದಾರೆ. 

ಅಮೆರಿಕದ ಒತ್ತಡದ ಮೇರೆಗೆ ಚುನಾವಣಾ ಆಯೋಗವು ಸೈಯದ್‌ ಪಕ್ಷವನ್ನು ಉಗ್ರ ಸಂಘಟನೆಗೆ ಸೇರಿಸುವ ಚಿಂತನೆ ನಡೆಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸುವ ಸಚಿವರು, ‘ಇದನ್ನು ಕಾರ್ಯಗತಗೊಳಿಸಲು ನಾವು ಬಿಡುವುದಿಲ್ಲ’ ಎಂದಿದ್ದಾರೆ. 

‘ನಮ್ಮ ಪಕ್ಷ ಅಧಿಕಾರದಲ್ಲಿ ಇರುವವರೆಗೂ ಹಫೀಜ್‌ ಸೇರಿದಂತೆ ಪಾಕಿಸ್ತಾನದ ಪರವಾಗಿ ದನಿ ಎತ್ತುವವರನ್ನು ಬೆಂಬಲಿಸುತ್ತೇವೆ’ ಎಂದು ಸಚಿವರು ಹೇಳಿರುವ ಅಂಶವೂ ಇದರಲ್ಲಿದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !