ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲಿನಲ್ಲಿ ಕಳುವಾಗಿದ್ದ 310 ವರ್ಷ ಹಳೆಯ ವಯಲಿನ್‌, ಮತ್ತೆ ಕಲಾವಿದನ ಕೈಸೇರಿತು

Last Updated 4 ನವೆಂಬರ್ 2019, 19:38 IST
ಅಕ್ಷರ ಗಾತ್ರ

ಲಂಡನ್‌: ರೈಲಿನಲ್ಲಿ ಕಳೆದುಕೊಂಡಿದ್ದ 310 ವರ್ಷಗಳಷ್ಟು ಹಳೆಯದಾದ ‘ವಯಲಿನ್‌’ ಯಾವುದೇ ಹಾನಿಗೊಳಗಾದೇ ಮತ್ತೆ ಕಲಾವಿದ ಬಳಿಗೆ ಹಿಂದಿರುಗಿದೆ!

ಕಲಾವಿದ ಸ್ಟೀಫನ್‌ ಮೊರಿಸ್ ತಮ್ಮ ವಯಲಿನ್‌ ಕಳೆದುಕೊಂಡಿದ್ದು, ಅದನ್ನು ಹಿಂದಿರುಗಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದರು. ಇಲ್ಲಿನ ಸೂಪರ್‌ ಮಾರ್ಕೆಟ್‌ನ ಕಾರು ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ವಯಲಿನ್‌ ಹಿಂದಿರುಗಿಸಿದ್ದಾರೆ.

ಇದರ ಮೌಲ್ಯ ₹ 2.26 ಕೋಟಿ ಆಗಿದ್ದು, ಇದನ್ನು 1709ರಲ್ಲಿ ರೋಮನ್‌ ಕರಕುಶಲಕರ್ಮಿ ಡೇವಿಡ್‌ ಟೆಕ್ಲರ್‌ ಎಂಬುವರು ರೂಪಿಸಿದ್ದರು.

‘ನನ್ನ ವಯಲಿನ್‌ ಹಾಳಾಗದೇ ಮನೆಗೆ ಹಿಂದಿರುಗಿದೆ. ಇದರ ಇಂಪು ಹಾಗೆಯೇ ಇದೆ. ತಂದುಕೊಟ್ಟವರು ಕ್ಷಮೆ ಕೇಳಿದ್ದಾರೆ. ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ಸ್ಟೀಫನ್‌ ಟ್ವೀಟ್‌ ಮಾಡಿದ್ದಾರೆ. ಹಿಂದಿರುಗಿಸಿದ ವ್ಯಕ್ತಿಯ ವಿರುದ್ಧ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT