‘ಎಫ್ಡಿಐ ಇಳಿಕೆ ಮತ್ತು ಜಾಗತಿಕ ಮೊತ್ತದಲ್ಲಿನ ಇಳಿಕೆಯು ನೀತಿ ರೂಪಿಸುವವರಿಗೆ ಅದರಲ್ಲೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ’ ಎಂದು ಯುಎನ್ಸಿಟಿಎಡಿಯ ಪ್ರಧಾನ ಕಾರ್ಯದರ್ಶಿ ಮುಖಿಸಾ ಕಿಟುಯಿ ಹೇಳಿ
ದ್ದಾರೆ. ‘ಅಮೆರಿಕದ ತೆರಿಗೆ ಸುಧಾರಣೆ ನೀತಿಯಿಂದಾಗಿ ಭವಿಷ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಹೂಡಿಕೆ ತಗ್ಗುವ ಸಾಧ್ಯತೆ ಇದೆ. ಆಧುನಿಕ ಕೈಗಾರಿಕಾ ನೀತಿಗಳು ವೈವಿಧ್ಯ ಮತ್ತು ಸಂಕೀರ್ಣವಾಗಿರುವುದರಿಂದ ಗಡಿಯಾಚೆಗಿನ ಹೂಡಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ’ ಎಂದೂ ಹೇಳಿದ್ದಾರೆ.