ಶನಿವಾರ, ಫೆಬ್ರವರಿ 22, 2020
19 °C

ಸೋವಿಯತ್‌ ಭಿನ್ನಮತೀಯ ಬುಕೊವ್‌ಸ್ಕಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಸ್ಕೊ (ಎಪಿ): ಸೋವಿಯತ್‌ ಕಾಲದ ಪ್ರಮುಖ ಭಿನ್ನಮತೀಯ ನಾಯಕ ವ್ಲಾಡಿಮಿರ್‌ ಬುಕೊವ್‌ಸ್ಕಿ(76) ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಸೋವಿಯತ್‌ ಮನೋವೈದ್ಯಶಾಸ್ತ್ರದ ದುರುಪಯೋಗವನ್ನು ಬಹಿರಂಗಪಡಿಸಲು ಶ್ರಮಿಸಿದ್ದ ಇವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದರು. 1976ರಲ್ಲಿ ಸೋವಿಯತ್ ಒಕ್ಕೂಟದಿಂದ ಇವರನ್ನು ಗಡಿಪಾರು ಮಾಡಲಾಗಿತ್ತು. ನಂತರ ಇವರು ಇಂಗ್ಲೆಂಡ್‌ನಲ್ಲಿ ನೆಲೆಸಿದ್ದರು. 

ಕಮ್ಯುನಿಸ್ಟ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಕ್ಕಾಗಿ ಇವರನ್ನು 12 ವರ್ಷ ಸೋವಿಯತ್‌ ಕಾರಾಗೃಹದಲ್ಲಿ ಇರಿಸಲಾಗಿತ್ತು. ಸೋವಿಯತ್ ಒಕ್ಕೂಟದಲ್ಲಿ ನಿಷೇಧಿಸಲಾಗಿದ್ದ ಪುಸ್ತಕಗಳು ಇವರ ಬಳಿ ಇದ್ದ ಕಾರಣ 1963ರಲ್ಲಿ ಮೊದಲ ಬಾರಿಗೆ ಬಂಧಿಸಲಾಗಿತ್ತು. ಬಳಿಕ ಇವರನ್ನು ಮಾನಸಿಕ ಅಸ್ವಸ್ಥರೆಂದು ಘೋಷಿಸಿ, ಆಸ್ಪತ್ರೆಗೂ ಸೇರಿಸಲಾಗಿತ್ತು. 

ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಯುವ ಸಂಘಟನೆಯನ್ನು ಟೀಕಿಸಿ ಪ್ರಬಂಧ ಬರೆದಿದ್ದ ಇವರನ್ನು 1961ರಲ್ಲಿ ಮಾಸ್ಕೊ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿತ್ತು. ಅಲ್ಲಿ ಇವರು ಜೀವವಿಜ್ಞಾನ ಅಧ್ಯಯನ ಮಾಡುತ್ತಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)