ಝಾಕೀರ್‌ ನಾಯ್ಕ್‌ ಗಡಿಪಾರು ಇಲ್ಲ: ಮಲೇಷ್ಯಾ ಪ್ರಧಾನಿ

7

ಝಾಕೀರ್‌ ನಾಯ್ಕ್‌ ಗಡಿಪಾರು ಇಲ್ಲ: ಮಲೇಷ್ಯಾ ಪ್ರಧಾನಿ

Published:
Updated:
ಝಾಕೀರ್‌ ನಾಯ್ಕ್

ಪುತ್ರಜಯ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್‌ ನಾಯ್ಕ್‌ ಅವರನ್ನು ಭಾರತಕ್ಕೆ ಗಡಿಪಾರು ಮಾಡುವುದಿಲ್ಲ ಎಂದು ಮಲೇಷ್ಯಾ ಪ್ರಧಾನಿ ಮಹಾತೀರ್‌ ಮೊಹಮ್ಮದ್‌ ಸ್ಪಷ್ಟಪಡಿಸಿದ್ದಾರೆ.

 2016ರಲ್ಲಿ ಝಾಕೀರ್‌ ನಾಯ್ಕ್‌ ಭಾರತ ತೊರೆದು ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಮಲೇಷ್ಯಾದಲ್ಲಿ ಇವರಿಗೆ ಶಾಶ್ವತವಾಗಿ ವಾಸಿಸಲು ಅವಕಾಶ ಕಲ್ಪಿಸಲಾಗಿದೆ.

ಭಯೋತ್ಪಾದನೆ ಸಂಬಂಧಿಸಿದ ಚಟುವಟಿಕೆಗಳಿಗೆ ಕುಮ್ಮಕ್ಕು ಮತ್ತು ದ್ವೇಷ ಭಾಷಣ ಮಾಡಿದ ಆರೋಪವನ್ನು ಝಾಕೀರ್‌ ಎದುರಿಸುತ್ತಿದ್ದಾರೆ. ಆದರೆ, ಈ ಆರೋಪಗಳನ್ನು ಝಾಕೀರ್‌ ನಾಯ್ಕ್ ತಳ್ಳಿಹಾಕಿದ್ದಾರೆ.

ಝಾಕೀರ್‌ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಜನವರಿ ತಿಂಗಳಲ್ಲಿ ಮಲೇಷ್ಯಾಗೆ ಕೋರಲಾಗಿತ್ತು. ಉಭಯ ದೇಶಗಳ ನಡುವೆ ಹಸ್ತಾಂತರ ಒಪ್ಪಂದವಿದೆ.

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !