ಗುರುವಾರ , ಆಗಸ್ಟ್ 22, 2019
27 °C

ಗದ್ದೆಯಲ್ಲಿ ವಿಮಾನ ಇಳಿಸಿ 233 ಮಂದಿಯ ಪ್ರಾಣ ರಕ್ಷಿಸಿದ ಪೈಲಟ್

Published:
Updated:

ಮಾಸ್ಕೊ:  ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿಗಳು ಡಿಕ್ಕಿ ಹೊಡೆದ ಪರಿಣಾಮ ನಿಲ್ದಾಣದ ಬಳಿಯ ಹೊಲದಲ್ಲಿ ರಷ್ಯಾದ ವಿಮಾನ ಗುರುವಾರ ತುರ್ತು ಭೂಸ್ಪರ್ಶ ಮಾಡಿತು.

‘ವಿಮಾನದಲ್ಲಿದ್ದ ಎಲ್ಲ 226 ಜನ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಕೆಲವರಿಗೆ ವೈದ್ಯಕೀಯ ನೆರವು ನೀಡಲಾಗಿದೆ. ಒಬ್ಬರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಯಂತ್ರದಲ್ಲಿ ದೋಷ ಕಂಡು ಬಂದ ತಕ್ಷಣವೇ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ ಪೈಲಟ್‌ ಪ್ರಯಾಣಿಕರ ಪಾಲಿಗೆ ಹೀರೊ ಆಗಿದ್ದಾರೆ. ಈ ವಿಮಾನ (ಯುರಾಲ್‌ ಏರ್‌ಲೈನ್ಸ್‌ನ ಎ321) ಝುಕೋವ್‌ಸ್ಕಿ ನಿಲ್ದಾಣದಿಂದ ಕ್ರಿಮಿಯಾದ ಸಿಮ್‌ಫೆರೊಪೋಲ್‌ಗೆ ಹೊರಟಿತ್ತು. ಹಕ್ಕಿಗಳು ಡಿಕ್ಕಿ ಹೊಡೆದ ಪರಿಣಾಮ ಎರಡೂ ಎಂಜಿನ್‌ಗಳ ಕಾರ್ಯಾಚರಣೆ ಏರುಪೇರಾಗಿತ್ತು.

‘ತಕ್ಷಣವೇ ಎಂಜಿನ್‌ಗಳನ್ನು ಬಂದ್‌ ಮಾಡಿ, ರನ್‌ವೇಯಿಂದ 5 ಕಿಲೊಮೀಟರ್‌ ದೂರದಲ್ಲಿದ್ದ ಹೊಲದಲ್ಲಿ ವಿಮಾನ ಇಳಿಸುವ ಮೂಲಕ ಪೈಲಟ್‌ ದಮಿರ್‌ ಯುಸುಪೋವ್‌ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಪೈಲಟ್‌ ಹಾಗೂ ಇತರ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿದೆ’ ಎಂದು ರಷ್ಯಾದ ರೋಸಾವಿಯಾತ್ಸಿಯಾ ರಾಜ್ಯದ ವಿಮಾನಯಾನ ಏಜೆನ್ಸಿಯ ಮುಖ್ಯಸ್ಥ ಅಲೆ
ಕ್ಸಾಂಡರ್‌ ನೆರಾಡ್ಕೊ ಹೇಳಿದ್ದಾರೆ.

Post Comments (+)