ಶ್ರೀಲಂಕಾ: ಮಾದರಿ ಗ್ರಾಮಕ್ಕೆ ಭಾರತದ ನೆರವು

ಶುಕ್ರವಾರ, ಜೂಲೈ 19, 2019
23 °C
ಯುದ್ಧಪೀಡಿತ ಜನರು ಮತ್ತು ಎಸ್ಟೇಟ್ ಕಾರ್ಮಿಕರಿಗೆ ವಸತಿ ಯೋಜನೆ

ಶ್ರೀಲಂಕಾ: ಮಾದರಿ ಗ್ರಾಮಕ್ಕೆ ಭಾರತದ ನೆರವು

Published:
Updated:

ಕೊಲಂಬೊ: ಯುದ್ಧಪೀಡಿತ ಜನರು ಮತ್ತು ಎಸ್ಟೇಟ್ ಕಾರ್ಮಿಕರಿಗಾಗಿ ವಸತಿಯೋಜನೆಯ ಭಾಗವಾಗಿ ಭಾರತದ ಸಹಾಯದಿಂದ ನಿರ್ಮಿಸಲಾದ ಮಾದರಿ ಗ್ರಾಮಗಳನ್ನು ಶನಿವಾರ ಶ್ರೀಲಂಕಾದಲ್ಲಿ ಉದ್ಘಾಟಿಸಲಾಯಿತು. 

ಗೃಹ, ನಿರ್ಮಾಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸಜಿತ್ ಪ್ರೇಮದಾಸ, ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗ ಮತ್ತು ಭಾರತದ ಹಂಗಾಮಿ ಹೈಕಮಿಷನರ್‌ ಶಿಲ್ಪಕ್ ಅಂಬುಳೆ ಶನಿವಾರ ರಾಣಿದುಗಮದಲ್ಲಿ ಮಾದರಿ ಗ್ರಾಮ ಉದ್ಘಾಟಿಸಿದರು. 

ಶ್ರೀಲಂಕಾದ ಗೃಹ, ನಿರ್ಮಾಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವಾಲಯವು ಭಾರತದ ಸಹಯೋಗದಲ್ಲಿ 100 ಮಾದರಿ ಗ್ರಾಮಗಳನ್ನು ನಿರ್ಮಿಸಲು ಮುಂದಾಗಿದ್ದು, ಒಟ್ಟಾರೆ 2, 400 ಮನೆಗಳನ್ನು ನಿರ್ಮಿಸಲು ಉದ್ದೇಶಿಸಿದೆ. ಇದಕ್ಕಾಗಿ ಭಾರತ ₹ 129 ಕೋಟಿ ನೆರವು ನೀಡಿದೆ. 

ಶ್ರೀಲಂಕಾದ ಉತ್ತರ ಭಾಗದಲ್ಲಿ ಯುದ್ಧಪೀಡಿತರು ಮತ್ತು ಪೂರ್ವಭಾಗದಲ್ಲಿ ಎಸ್ಟೇಟ್ ಕಾರ್ಮಿಕರಿಗಾಗಿ ರೂಪಿಸಿರುವ 60 ಸಾವಿರ ವಸತಿ ಯೋಜನೆಗೆ ಹೆಚ್ಚುವರಿಯಾಗಿ 2,400 ಮನೆಗಳನ್ನು ಭಾರತ ನಿರ್ಮಿಸಿಕೊಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !