ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃತ್ತಿ ಆಧಾರಿತ ವೀಸಾ ತಾತ್ಕಾಲಿಕ ನಿಷೇಧಿಸಲು ಅಮೆರಿಕ ಚಿಂತನೆ

Last Updated 9 ಮೇ 2020, 16:12 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎಚ್‌–1ಬಿ ಸೇರಿದಂತೆ ವೃತ್ತಿ ಆಧಾರಿತ ವೀಸಾ ಅನ್ನು ತಾತ್ಕಾಲಿಕವಾಗಿ ನಿಷೇಧಿಸಲು ಅಮೆರಿಕ ಯೋಜನೆ ರೂಪಿಸುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಅಮೆರಿಕ ಅಧ್ಯಕ್ಷರ ವಲಸೆ ಕಾರ್ಮಿಕರ ಸಲಹೆಗಾರರು ಮುಂದಿನ ಆದೇಶಕ್ಕಾಗಿ ಯೋಜನೆಗಳನ್ನು ರೂಪಿಸುತ್ತಿದ್ದು, ಅದು ಈ ತಿಂಗಳು ಪ್ರಕಟವಾಗುವ ನಿರೀಕ್ಷೆ ಇದೆ. ಈ ಯೋಜನೆಯು ಹೊಸ ತಾತ್ಕಾಲಿಕ, ವೃತ್ತಿ ಆಧಾರಿತ ವೀಸಾಗಳ ವಿತರಣೆಯನ್ನು ನಿಷೇಧಿಸುತ್ತದೆ’ ಎಂದು ದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಕೊರೊನಾ ವೈರಸ್ ಸೋಂಕಿನ ಕಾರಣಕ್ಕಾಗಿ ಅಮೆರಿಕದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚಳವುಂಟಾಗಿದೆ. ಈ ಕಾರಣಕ್ಕಾಗಿ ಅಮೆರಿಕ ವೃತ್ತಿ ಆಧಾರಿತ ವೀಸಾಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಮುಂದಾಗಿದೆ.

ಎಚ್‌–1 ಬಿ ವಲಸೆರಹಿತ ವೀಸಾ ಆಗಿದ್ದು, ತಾಂತ್ರಿಕ ಪರಿಣತಿಯ ಅಗತ್ಯವಿರುವ ಉದ್ಯೋಗಗಳಿಗೆ ಭಾರತ, ಚೀನಾಗಳಿಂದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಅವಕಾಶ ನೀಡುತ್ತದೆ. ಅಮೆರಿಕದಲ್ಲಿ ಪ್ರಸ್ತುತ ಸುಮಾರು 5 ಲಕ್ಷ ವಲಸೆ ಕಾರ್ಮಿಕರು ಎಚ್–1ಬಿ ವೀಸಾದಡಿ ಉದ್ಯೋಗ ಮಾಡುತ್ತಿದ್ದಾರೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT