ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಯಿಘರ್ ಮುಸ್ಲಿಮರ ಮೇಲೆ ಚೀನಾ ದಬ್ಬಾಳಿಕೆ ತಡೆಗೆ ಮಸೂದೆ: ಡೊನಾಲ್ಡ್ ಟ್ರಂಪ್ ಸಹಿ

Last Updated 18 ಜೂನ್ 2020, 7:53 IST
ಅಕ್ಷರ ಗಾತ್ರ

ವಾಷಿಂಗ್ಟನ್: ಚೀನಾದ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಉಯಿಘರ್ ಮುಸ್ಲಿಮರ ಮೇಲೆ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ತಡೆಗೆ ಅಮೆರಿಕ ರೂಪಿಸಿರುವ ಕಾಯ್ದೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ತಪ್ಪಿತಸ್ಥ ಚೀನೀ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವಕ್ಕೆ ಈ ಕಾಯ್ದೆ ದಾರಿ ಮಾಡಿಕೊಟ್ಟಿದೆ.

ಚೀನಾದ ಉಯಿಘರ್ ಸೇರಿದಂತೆ ಇತರೆ ಅಲ್ಪಸಂಖ್ಯಾತ ಧಾರ್ಮಿಕ ಸಮುದಾಯಗಳ ಜನಾಂಗೀಯ ಅಸ್ಮಿತೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಿರ್ಮೂಲನೆ ಮಾಡಲು ಯತ್ನಿಸುವವರನ್ನು ‘ದಿ ಉಯಿಘರ್ ಮಾನವ ಹಕ್ಕು ಉಲ್ಲಂಘನೆ ಕಾಯ್ದೆ 2020’ ಶಿಕ್ಷೆಗೆ ಒಳಪಡಿಸಲಿದೆ.

ಉಯಿಘರ್ ಮುಸ್ಲಿಮರ ಮೇಲೆ ದಬ್ಬಾಳಿಕೆ ನಡೆಸುವ ಚೀನಾದ ಅಧಿಕಾರಿಗಳನ್ನು ಈ ಕಾಯ್ದೆಯು ಹೊಣೆಗಾರರನ್ನಾಗಿ ಮಾಡಲಿದೆ. ಈ ಕಾಯ್ದೆಗೆ ರಿಪಬ್ಲಿಕನ್ನರು ಮತ್ತು ಡೆಮಾಕ್ರಟಿಕ್ ಪಕ್ಷದ ಸರ್ವ ಸದಸ್ಯರಿಂದ ಬೆಂಬಲ ವ್ಯಕ್ತವಾಗಿದೆ.

ಕಾಯ್ದೆಗೆ ಸಹಿ ಹಾಕಿದ ಟ್ರಂಪ್ ಅವರಿಗೆ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಧನ್ಯವಾದ ಹೇಳಿದೆ.

ಅಮೆರಿಕದ ಹೊಸ ಕಾಯ್ದೆಯನ್ನು ಟೀಕಿಸಿರುವ ಚೀನಾ, ‘ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಚೀನಾದ ನೀತಿಗಳ ಮೇಲೆ ದುರುದ್ದೇಶಪೂರ್ಕವಾಗಿ ಆಕ್ರಮಿಸುವ ಉದ್ದೇಶವಿದು’ ಎಂದು ಕಿಡಿಕಾರಿದೆ.

‘ಅಮೆರಿಕಕ್ಕೆ ಚೀನಾ ತಿರುಗೇಟು ನೀಡಲಿದ್ದು, ಮುಂದಾಗುವ ಪರಿಣಾಮಗಳನ್ನು ಆ ದೇಶ ಎದುರಿಸಬೇಕಿದೆ’ ಎಂದು ವಿದೇಶಾಂಗ ಸಚಿವಾಲಯ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT