ಕೂಚಿಬೊಟ್ಲ ಕೊಲೆಗಾರನಿಗೆ 78 ವರ್ಷ ಜೀವಾವಧಿ ಶಿಕ್ಷೆ

7

ಕೂಚಿಬೊಟ್ಲ ಕೊಲೆಗಾರನಿಗೆ 78 ವರ್ಷ ಜೀವಾವಧಿ ಶಿಕ್ಷೆ

Published:
Updated:

ನ್ಯೂಯಾರ್ಕ್‌: ಭಾರತ ಮೂಲದ ಎಂಜಿನಿಯರ್‌ ಶ್ರೀನಿವಾಸ ಕೂಚಿಬೊಟ್ಲಾ  ಅವರನ್ನು ಹತ್ಯೆ ಮಾಡಿದ್ದ ಅಮೆರಿಕ ನೌಕಾಪಡೆಯ ಅಧಿಕಾರಿ ಆ್ಯಡಂ ಪ್ಯುರಿಂಟನ್‌ಗೆ (53) ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಿಕ್ಷೆಯ ಅವಧಿ 78 ವರ್ಷವಾಗಿದ್ದು, ಆ್ಯಡಂಗೆ 100 ವರ್ಷ ಆಗುವವರೆಗೂ ಪೆರೋಲ್‌ ನೀಡಲು ನಿರ್ಬಂಧವಿದೆ.

2017ರ ಫೆಬ್ರುವರಿಯಲ್ಲಿ ಕನ್ಸಾಸ್‌ನ ಬಾರೊಂದರ ಬಳಿ ಇರಾನೀಯರೆಂದು ತಿಳಿದು ಕೂಚಿಬೊಟ್ಲ ಮತ್ತು ಅವರ ಸ್ನೇಹಿತರ ಮೇಲೆ ಆ್ಯಡಂ ಗುಂಡಿನ ದಾಳಿ ನಡೆಸಿದ್ದ. ಆಗ ಕೂಚಿಬೊಟ್ಲ ಮೃತರಾಗಿ, ಮತ್ತೊಬ್ಬ ಭಾರತೀಯ ಅಲೋಕ್‌ ಮಡಸಾನಿ ಹಾಗೂ ಕನ್ಸಾಸ್‌ ನಿವಾಸಿ ಇಯಾನ್‌ ಗ್ರಿಲ್ಲಟ್‌ ಗಾಯಗೊಂಡಿದ್ದರು.

‘ನನ್ನ ಪತಿಯೊಂದಿಗೆ ಸಾವಧಾನವಾಗಿ ಮಾತನಾಡಿದ್ದರೆ, ಕಂದು ಬಣ್ಣದವರೆಲ್ಲರೂ ಕೆಟ್ಟವರಲ್ಲ ಅವರು ಅಮೆರಿಕದ ಪ್ರಗತಿಗೆ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ನಿಮಗೆ ಮನವರಿಕೆ ಮಾಡಿಕೊಡುತ್ತಿದ್ದರು’ ಎಂದು ಆ್ಯಡಂನನ್ನು ಉದ್ದೇಶಿಸಿ ಕೂಚಿಬೊಟ್ಲ ಪತ್ನಿ ಸುನಯನಾ ದುಮಾಲ ಹೇಳಿದ್ದಾರೆ.

‘ದಯಾಳುವಾಗಿದ್ದ, ಇತರರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ನನ್ನ ಪತಿ ಶ್ರೀನು ಮತ್ತು ನಾನು ಅಪಾರ ಕನಸು ಮತ್ತು ಆಕಾಂಕ್ಷೆಗಳೊಂದಿಗೆ ಅಮೆರಿಕಕ್ಕೆ ಬಂದಿದ್ದೆವು. ಆದರೆ ಅವೆಲ್ಲವೂ ಚೂರುಚೂರಾದವು’ ಎಂಬ ಸುನಯನಾ ಅವರ ಹೇಳಿಕೆಯನ್ನು ಕೋರ್ಟ್‌ನಲ್ಲಿ ಓದಿ ಹೇಳಲಾಯಿತು.

ಬಣ್ಣ, ರಾಷ್ಟ್ರೀಯತೆ ಕಾರಣದಿಂದ ಈ ದಾಳಿ ನಡೆಸಿದ್ದಾಗಿ ವಿಚಾರಣೆ ವೇಳೆ ಆ್ಯಡಂ ತಪ್ಪೊಪ್ಪಿಕೊಂಡಿದ್ದ.

ಇದನ್ನೂ ಓದಿ...

ಅಮೆರಿಕದಲ್ಲಿ ಜನಾಂಗೀಯ ದ್ವೇಷ: ಹೈದರಾಬಾದ್‌ನ ಟೆಕಿ ಹತ್ಯೆ

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !