7

ಇರಾನ್‍ನಿಂದ ತೈಲ ಉತ್ಪನ್ನಗಳ ಆಮದು ನಿಲ್ಲಿಸುವಂತೆ ಭಾರತಕ್ಕೆ ಅಮೆರಿಕ ಆದೇಶ

Published:
Updated:

ವಾಷಿಂಗ್ಟನ್: ನವಂಬರ್ ತಿಂಗಳ ಹೊತ್ತಿಗೆ ಇರಾನ್‌ನಿಂದ ತೈಲ ಉತ್ಪನ್ನಗಳ ಆಮದು ಸಂಪೂರ್ಣವಾಗಿ ನಿಲ್ಲಿಸುವಂತೆ ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳಿಗೆ ಅಮೆರಿಕ ಆದೇಶ ನೀಡಿದೆ.

ಚೀನಾ ಮತ್ತು ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳು ನವಂಬರ್ 4 ತಾರೀಖಿನೊಳಗೆ ಇರಾನ್‍ನಿಂದ ತೈಲ ಉತ್ಪನ್ನಗಳ ಆಮದು ನಿಲ್ಲಿಸಬೇಕು ಎಂದು ಅಮೆರಿಕದ ಗೃಹ ಸಚಿವಾಲಯ ಹೇಳಿದೆ. ಚೀನಾ ಮತ್ತು ಭಾರತ ಇರಾನ್‍ನಿಂದ ತೈಲ ಆಮದು ಮಾಡುತ್ತಿರುವ ಪ್ರಧಾನ ರಾಷ್ಟ್ರಗಳಾಗಿವೆ.

ಇರಾನ್ ವಿರುದ್ಧ ಹೇರಿರುವ ವಾಣಿಜ್ಯ ನಿರ್ಬಂಧ ಭಾರತ ಮತ್ತು ಚೀನಾದ ಕಂಪನಿಗಳಿಗೂ ಅನ್ವಯವಾಗುತ್ತದೆ. ಈ ಎರಡು ರಾಷ್ಟ್ರಗಳಿಗೆ ಯಾವುದೇ ವಿನಾಯಿತಿ ನೀಡಲಾಗುವುದಿಲ್ಲ ಎಂದು ಅಮೆರಿಕದ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ರಾಜಕೀಯ ಮತ್ತು ಆರ್ಥಿಕವಾಗಿ ಇರಾನ್‍ನ್ನು ಪ್ರತ್ಯೇಕವಾಗಿಡಲು ಅಮೆರಿಕ ಈ ರೀತಿಯ ನಡೆ ಸ್ವೀಕರಿಸಿದೆ.

 ಇರಾನ್‌‍ನಿಂದ ತೈಲ ಆಮದಿನ ಪ್ರಮಾಣವನ್ನು ಈಗಲೇ ಕಡಿಮೆ ಮಾಡುತ್ತಾ ಬಂದರೆ ನವಂಬರ್ ತಿಂಗಳ ಹೊತ್ತಿಗೆ ಪೂರ್ಣವಾಗಿ ನಿಲ್ಲಿಸಬಹುದು. ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅಮೆರಿಕ ಹೇಳಿದೆ.
ಆದಾಗ್ಯೂ, ಮುಂದಿನ ವಾರ ಭಾರತದೊಂದಿಗೆ ನಡೆಯಲಿರುವ ಮಾತುಕತೆಯಲ್ಲಿ ಈ ವಿಷಯವನ್ನು ಅಮೆರಿಕ ಚರ್ಚಿಸುವ ಸಾಧ್ಯತೆ ಇದೆ. 

ಕಳೆದ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಜತೆಗಿನ 2015ರ ಐತಿಹಾಸಿಕ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿದ್ದರು.

ಬರಹ ಇಷ್ಟವಾಯಿತೆ?

 • 12

  Happy
 • 11

  Amused
 • 2

  Sad
 • 4

  Frustrated
 • 5

  Angry

Comments:

0 comments

Write the first review for this !