ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ: ಅಪಹೃತರ ವಿಡಿಯೊ ಬಿಡುಗಡೆ

Last Updated 1 ಆಗಸ್ಟ್ 2018, 15:49 IST
ಅಕ್ಷರ ಗಾತ್ರ

ವಾಷಿಂಗ್ಟನ್: ಜಪಾನ್‌ನ ಪತ್ರಕರ್ತ ಜಂಪಿ ಯಸುದಾ ಹಾಗೂ ಇಟಲಿಯ ನಾಗರಿಕ ಅಲೆಸಂಡ್ರೋ ಅವರನ್ನು ಅಪಹರಿಸಿರುವ ಸಿರಿಯಾದ ಜಿಹಾದಿಗಳು, ಅವರ ವಿಡಿಯೊಗಳನ್ನು ಬಿಡುಗಡೆ ಮಾಡಿದ್ದಾರೆ. ಅಪಹೃತರು ತಮ್ಮ ಬಿಡುಗಡೆಗೆ ಮನವಿ ಮಾಡುತ್ತಿರುವ ದೃಶ್ಯ ಈ ವಿಡಿಯೊದಲ್ಲಿದೆ.

ಎಸ್‌ಐಟಿಇ ಸಂಸ್ಥೆಯು ವಿಡಿಯೊಗಳನ್ನು ಬಿಡುಗಡೆ ಮಾಡಿದೆ. ಆದರೆ ಯಾವ ಸಂಘಟನೆಯು ಅಪಹರಣ ಮಾಡಿದೆ ಎಂದು ತಿಳಿಸಿಲ್ಲ. ಕಿತ್ತಳೆ ಬಣ್ಣದ ಬಟ್ಟೆ ಧರಿಸಿರುವ ಅಪಹೃತರು ಗೋಡೆಯ ಮುಂದೆ ಮಂಡಿಯೂರಿ ಕುಳಿತಿರುವ ದೃಶ್ಯವಿದೆ. ಶಸ್ತ್ರಸಜ್ಜಿತ ವ್ಯಕ್ತಿಗಳು ಇವರಿಗೆ ಕಾವಲಿದ್ದಾರೆ.

ತಾವು ಅಲ್ ನುಸ್ರಾ ಸಂಘಟನೆಯಿಂದ ಅಪಹರಣಕ್ಕೆ ಒಳಗಾಗಿರಬಹುದು ಎಂದು ಜಂಪಿ ಹೇಳಿದ್ದಾರೆ. ತಾವು ಕೊರಿಯನ್ ಎಂದು ಪರಿಚಿಯಿಸಿಕೊಳ್ಳುವ ಇವರು ಜಪಾನ್ ಭಾಷೆಯಲ್ಲಿ ಮಾತನಾಡಿದ್ದಾರೆ. 2015ರಲ್ಲಿ ಇವರ ಅಪಹರಣವಾಗಿತ್ತು.

ಇಟಲಿ ಸರ್ಕಾರಕ್ಕೆ ಇದು ತಮ್ಮ ಕಡೆಯ ಮನವಿ ಎಂದುಅಲೆಸಂಡ್ರೋ ಅವರು ಹೇಳಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಟರ್ಕಿಯಲ್ಲಿ ಇವರನ್ನು ಅಪಹರಿಸಿ ಬಳಿಕ ಸಿರಿಯಾಗೆ ಕರೆತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT