ಸೋಮವಾರ, ಜನವರಿ 27, 2020
24 °C
ಪತಿಯ ಬಿಡುಗಡೆಗೆ ಪತ್ನಿ ಮನವಿ

ಆಕ್ಷೇಪಾರ್ಹ ಸಂದೇಶ ಸೌದಿ ಪೊಲೀಸರ ವಶದಲ್ಲಿ ಹರೀಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಫೇಸ್‌ಬುಕ್‌ನಲ್ಲಿ ಆಕ್ಷೇಪಾರ್ಹ ಬರಹ ಪ್ರಕಟಿಸಿದ ಆರೋಪದ ಮೇಲೆ ಸೌದಿ ಅರೆಬೀಯಾ ಪೊಲೀಸರ ವಶ
ದಲ್ಲಿರುವ ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಬೀಜಾಡಿಯ ಹರೀಶ್‌ ಬಂಗೇರ ಬಿಡುಗಡೆಗೆ ನೆರವು ಕೋರಿ ಕುಟುಂಬಸ್ಥರು ಸೋಮವಾರ ಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದರು.

‘ಕಿಡಿಗೇಡಿಗಳು ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಸಮಸ್ಯೆಯಲ್ಲಿ ಸಿಲುಕಿಸಿದ್ದಾರೆ. ಕಾಸರಗೋಡಿನಲ್ಲಿ ನಕಲಿ ಖಾತೆ ಸಕ್ರಿಯವಾಗಿರುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ಕುಟುಂಬಕ್ಕೆ ಸರ್ಕಾರದ ತುರ್ತು ನೆರವಿನ ಅಗತ್ಯವಿದೆ’ ಎಂದು ಪತ್ನಿ ಸುಮನಾ ಮನವಿ ಮಾಡಿದರು.

ಬಂಧನ ಖಚಿತಪಡಿಸಿದ ದೊರೆ: ಹರೀಶ್ ಬಂಗೇರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಸೌದಿ ಯುವದೊರೆ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು