ಬುಧವಾರ, ಡಿಸೆಂಬರ್ 8, 2021
28 °C
ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪುರಸ್ಕಾರಗಳು ಪ್

ಕುತ್ತೆತ್ತೂರು ಸಹಿತ ಆರು ಮಂದಿಗೆ ‘ಬ್ಯಾರಿ’ ಗೌರವ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಾಹಿತಿಗಳಾದ ಅಬ್ದುಲ್ ರೆಹ್ಮಾನ್ ಕುತ್ತೆತ್ತೂರು, ಬಶೀರ್ ಅಹ್ಮದ್ ಕೀನ್ಯ ಸಹಿತ ಆರು ಮಂದಿಗೆ ‘ಗೌರವ ಪ್ರಶಸ್ತಿ’ ಹಾಗೂ 10 ಮಂದಿಗೆ ‘ಗೌರವ ಪುರಸ್ಕಾರ’ಗಳನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. 

ಅಕಾಡೆಮಿ ಕಚೇರಿಯಲ್ಲಿ ಮಂಗಳವಾರ ಅಧ್ಯಕ್ಷ ರಹೀಂ ಉಚ್ಚಿಲ್‌ 2019 ಮತ್ತು 2020ನೇ ಸಾಲಿನ ‘ಗೌರವ ಪ್ರಶಸ್ತಿ’  ಹಾಗೂ ಗೌರವ ಪುರಸ್ಕಾರಗಳನ್ನು ಪ್ರಕಟಿಸಿದರು.

‘ಗೌರವ ಪ್ರಶಸ್ತಿಯು ತಲಾ ₹50 ಸಾವಿರ ಹಾಗೂ ಪುರಸ್ಕಾರವು ತಲಾ ₹10 ಸಾವಿರ ನಗದು ಹೊಂದಿರುತ್ತದೆ. ಅದರ ಜೊತೆಗೆ ಶಾಲು, ಹಾರ, ಫಲ ತಾಂಬೂಲ, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳ ಗೌರವ ಸಮರ್ಪಿಸಲಾಗುವುದು. ಕೋವಿಡ್–19 ಸೋಂಕು ನಿಯಂತ್ರಣಕ್ಕೆ ಬಂದ ಬಳಿಕ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅವರು ತಿಳಿಸಿದರು.

2019ನೇ ಸಾಲಿನಲ್ಲಿ ಅಬ್ದುಲ್ ರಹ್ಮಾನ್ ಕುತ್ತೆತ್ತೂರು (ಬ್ಯಾರಿ ಸಾಹಿತ್ಯ), ಇಸ್ಮಾಯಿಲ್ ತಣ್ಣೀರುಬಾವಿ(ಬ್ಯಾರಿ ಕಲೆ), ಎಂ. ಅಹ್ಮದ್ ಬಾವಾ ಮೊಹಿದಿನ್ (ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ) ಹಾಗೂ 2020ನೇ ಸಾಲಿನಲ್ಲಿ ಬಶೀರ್ ಅಹ್ಮದ್ ಕಿನ್ಯ (ಬ್ಯಾರಿ ಸಾಹಿತ್ಯ), ವೀಣಾ ಮಂಗಳೂರು (ಬ್ಯಾರಿ ಸಿನಿಮಾ, ನಾಟಕ, ಕಲೆ) ಹಾಗೂ ಸಿದ್ದೀಕ್ ಮಂಜೇಶ್ವರ (ಬ್ಯಾರಿ ಸಂಘಟನೆ ಮತ್ತು ಸಮಾಜ ಸೇವೆ) ಅವರನ್ನು ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗೌರವ ಪುರಸ್ಕಾರಕ್ಕೆ 2019ನೇ ಸಾಲಿನಲ್ಲಿ ಅಬ್ದುಲ್ ರಝಾಕ್ ಅನಂತಾಡಿ(ಬ್ಯಾರಿ ಶಿಕ್ಷಣ) ಟಿ.ಎಸ್. ಹುಸೈನ್(ಬ್ಯಾರಿ ಸಾಹಿತ್ಯ),  ಅಬ್ದುಲ್ ಮಜೀದ್ ಸೂರಲ್ಪಾಡಿ (ಬ್ಯಾರಿ ಸಂಯುಕ್ತ ಕ್ಷೇತ್ರ ), ಆಪತ್ಬಾಂಧವ ಆಸಿಫ್ ಕಾರ್ನಾಡು (ಸಮಾಜ ಸೇವೆ ಕ್ಷೇತ್ರ), ಆಲಿಕುಂಞ  ಪಾರೆ (ಬ್ಯಾರಿ ಸಂಘಟನೆ) ಹಾಗೂ 2020ನೇ ಸಾಲಿನಲ್ಲಿ ಡಾ.ಇಸ್ಮಾಯಿಲ್(ವೈದ್ಯಕೀಯ ಕ್ಷೇತ್ರ), ಟಿ.ಎ. ಮೊಹಮ್ಮದ್ ಆಸಿಫ್ (
ಬ್ಯಾರಿ ಶಿಕ್ಷಣ), ಇಲ್ಯಾಸ್ ಮಂಗಳೂರು (ಸಮಾಜ ಸೇವೆ),  ರಾಶ್ ಬ್ಯಾರಿ ( ಬ್ಯಾರಿ ಸಂಘಟನೆ), ಸಫ್ವಾನ್ ಶಾ ಬಹರೈನ್(ಬ್ಯಾರಿ ಯುವ ಪ್ರತಿಭೆ) ಆಯ್ಕೆ ಮಾಡಲಾಗಿದೆ. 

ಪತ್ರಿಕಾಗೋಷ್ಠಿಯಲ್ಲಿ ರಿಜಿಸ್ಟ್ರಾರ್ ಪೂರ್ಣಿಮಾ ಹಾಗೂ ಸದಸ್ಯರು ಇದ್ದರು.

ಬ್ಯಾರಿ ಮಾಧ್ಯಮ: ‘ರಾಷ್ಟ್ರೀಯ ಶಿಕ್ಷಣ ನೀತಿಯ ಮಾನದಂಡಗಳ ಪ್ರಕಾರ ಶೇ 75ಕ್ಕೂ ಹೆಚ್ಚು ಬ್ಯಾರಿ ಭಾಷಿಗ ವಿದ್ಯಾರ್ಥಿಗಳು ಇರುವ ಶಾಲೆಯನ್ನು ಬ್ಯಾರಿ ಮಾಧ್ಯಮ ಶಾಲೆಯನ್ನಾಗಿ ರಾಜ್ಯ ಸರ್ಕಾರ ಘೋಷಿಸಬೇಕು. ಆ ಶಾಲೆಗಳಲ್ಲಿ ಪಠ್ಯಕ್ರಮ ಸೇರಿದಂತೆ ಬ್ಯಾರಿ ಭಾಷೆಯಲ್ಲಿ ಬೋಧನೆಗೆ ಬೇಕಾದ ಸಕಲ ನೆರವನ್ನು ಅಕಾಡೆಮಿಯು ನೀಡಲಿದೆ. ಈ ಬಗ್ಗೆ ಶೀಘ್ರವೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು