ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಮೆಟ್ರೊ

7

ತಾಂತ್ರಿಕ ದೋಷದಿಂದ ಸ್ಥಗಿತಗೊಂಡ ಮೆಟ್ರೊ

Published:
Updated:

ಬೆಂಗಳೂರು: ಮೆಟ್ರೊ ರೈಲಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಇಳಿಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.

‘ಬೈಯಪ್ಪನಹಳ್ಳಿ ನಿಲ್ದಾಣದಿಂದ ಮೈಸೂರು ರಸ್ತೆ ಕಡೆಗೆ ರಾತ್ರಿ 10.45ರ ಸುಮಾರಿಗೆ ಹೊರಟ ರೈಲಿನಲ್ಲಿ ದೋಷ ಕಾಣಿಸಿಕೊಂಡಿದೆ. ಎಂ.ಜಿ.ರಸ್ತೆ ನಿಲ್ದಾಣಕ್ಕೆ ಅವಧಿಗಿಂತ ಸುಮಾರು 10 ನಿಮಿಷ ಮುಂಚಿತವಾಗಿ ರೈಲು ಆಗಮಿಸಿದೆ. ಮೆಜೆಸ್ಟಿಕ್‌ ನಿಲ್ದಾಣಕ್ಕೆ ಬಂದ ರೈಲು ಇದ್ದಕ್ಕಿದ್ದಂತೆಯೇ ನಿಂತುಬಿಟ್ಟಿತು. ಎಲ್ಲ ಪ್ರಯಾಣಿಕರು ಕೆಳಗಿಳಿಯುವಂತೆ ಅಲ್ಲಿದ್ದ ಸಿಬ್ಬಂದಿ ಸೂಚಿಸಿದರು. ಬಳಿಕ ಖಾಲಿ ಗಾಡಿ ಮುಂದಕ್ಕೆ ಹೋಯಿತು. ಸುಮಾರು 10 ನಿಮಿಷದ ಬಳಿಕ ಬಂದ ಇನ್ನೊಂದು ಗಾಡಿಯಲ್ಲಿ ಹತ್ತಿ ಮುಂದೆ ಪ್ರಯಾಣಿಸಿದೆವು’ ಎಂದು ಅತ್ತಿಗುಪ್ಪೆ ಕಡೆಗೆ ಹೋಗುತ್ತಿದ್ದ ಪ್ರಯಾಣಿಕರು ಮಾಹಿತಿ ನೀಡಿದರು.

‘ತಾಂತ್ರಿಕ ದೋಷ ಕಾಣಿಸಿಕೊಂಡದ್ದರಿಂದ ಪ್ರಯಾಣಿಕರನ್ನು ಇಳಿಸಬೇಕಾಯಿತು. ಗಾಡಿಯನ್ನು ಡಿಪೋಗೆ ಕಳುಹಿಸಲಾಗಿದೆ. ಇದರಿಂದ ಕೆಲಕಾಲ ಮೆಜೆಸ್ಟಿಕ್‌ ನಿಲ್ದಾಣದಲ್ಲಿ ದಟ್ಟಣೆ ಉಂಟಾಯಿತು. ವಾರಾಂತ್ಯದ ದಿನವಾದ್ದರಿಂದ ಎಂದಿಗಿಂತ ಹೆಚ್ಚು ದಟ್ಟಣೆ ಇರುತ್ತದೆ’ ಎಂದು ನಿಲ್ದಾಣದ ಸಿಬ್ಬಂದಿ ತಿಳಿಸಿದರು.

ಎರಡು ದಿನಗಳ ಹಿಂದೆ ನಾಗಸಂದ್ರದಿಂದ ಯಲಚೇನಹಳ್ಳಿಗೆ ಹೊರಟ ರೈಲಿನಲ್ಲಿಯೂ ತಾಂತ್ರಿಕ ದೋಷದಿಂದಾಗಿ ಅಲ್ಲಲ್ಲಿ ಸ್ಥಗಿತಗೊಳ್ಳುತ್ತಾ ಸಂಚರಿಸಿದ ಘಟನೆ ನಡೆದಿತ್ತು.

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !