ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬರಿಮಲೆ: ಸಂಘರ್ಷದಲ್ಲಿ ಭಾಗಿಯಾಗಿದ್ದ 1407 ಮಂದಿ ಬಂಧನ

Last Updated 25 ಅಕ್ಟೋಬರ್ 2018, 12:45 IST
ಅಕ್ಷರ ಗಾತ್ರ

ಕೊಚ್ಚಿ/ತಿರುವನಂತಪುರಂ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧಿಸಿ ನಡೆದ ಸಂಘರ್ಷದಲ್ಲಿ ಇಲ್ಲಿಯವರೆಗೆ 1407 ಮಂದಿಯನ್ನುಪೊಲೀಸರು ಬಂಧಿಸಿದ್ದಾರೆ.ಈ ವಿಷಯದಲ್ಲಿ 258 ಪ್ರಕರಣಗಳನ್ನು ದಾಖಲಿಸಲಾಗಿದೆ.

ಬಂಧಿತರಲ್ಲಿ ಎರ್ನಾಕುಳಂ ಮತ್ತು ತೃಪ್ಪೂಣಿತ್ತುರ ಪ್ರದೇಶದವರೇ ಹೆಚ್ಚು.ಎರ್ನಾಕುಳಂ ಗ್ರಾಮೀಣ ಪ್ರದೇಶದಿಂದ 75 ಮಂದಿ ಮತ್ತು ತೃಪ್ಪೂಣಿತ್ತುರದಿಂದ 51 ಮಂದಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರವರೆಗೆ ಬಂಧಿಸಲಾಗಿದೆ. ಇವರು ಪತ್ತನಂತಿಟ್ಟ, ನಿಲಯ್ಕಲ್, ಪಂಪಾ, ಸನ್ನಿಧಾನಂ ಮೊದಲಾದ ಪ್ರದೇಶಗಳಲ್ಲಿ ಸಂಭವಿಸಿದ ಸಂಘರ್ಷದಲ್ಲಿ ಭಾಗವಹಿಸಿದವರೂ, ನಿಷೇಧಾಜ್ಞೆ ಉಲ್ಲಂಘಿಸಿದವರೂ ಆಗಿದ್ದಾರೆ.
ಹಿಂಸಾಚಾರದಲ್ಲಿ ಭಾಗಿಯಾಗಿದ್ದ 210 ಮಂದಿಯ ಚಿತ್ರಗಳನ್ನು ಪೊಲೀಸರು ಪ್ರಕಟಿಸಿದ್ದಾರೆ.ಇನ್ನೂ ಹೆಚ್ಚಿನ ಜನರ ಫೋಟೊ ಪ್ರಕಟ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.
ಏತನ್ಮಧ್ಯೆ, ಪೊಲೀಸರು ಪ್ರಕಟಿಸಿದ ಫೋಟೊಗಳಲ್ಲಿ ಪತ್ತನಂತಿಟ್ಟ ಎಆರ್ ಶಿಬಿರದಲ್ಲಿದ್ದ ಪೊಲೀಸ್ ಇಬ್ರಾಹಿಂಕುಟ್ಟಿಯ ಫೋಟೊ ಪ್ರಕಟವಾಗಿ ವಿವಾದವಾಗಿದೆ.ಫೋಟೊ ಪ್ರಕಟಿಸುವಾಗ ಸೈಬರ್ ವಿಭಾಗದವರ ಕಣ್ತಪ್ಪಿನಿಂದ ಈ ಚಿತ್ರ ಪ್ರಕಟವಾಗಿದೆ ಎಂದು ಪೊಲೀಸರುಸ್ಪಷ್ಟನೆ ನೀಡಿದ್ದಾರೆ.

ಕೋಯಿಕ್ಕೋಡ್31 , ಎರ್ನಾಕುಳಂ 18, ತಿರುವನಂತಪುರಂ 12 ಮೊದಲಾದ ಜಿಲ್ಲೆಗಳಿಂದಲೂ ಸಂಘರ್ಷದಲ್ಲಿ ಭಾಗಿಯಾಗಿದ್ದ ಜನರನ್ನು ಬಂಧಿಸಲಾಗಿದೆ.ಪಾಲಕ್ಕಾಡ್, ತ್ರಿಶ್ಶೂರ್, ಕೋಟ್ಟಯಂ, ಆಲಪ್ಪುಳ ಜಿಲ್ಲೆಗಳಲ್ಲಿಯೂ ಜನರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT