ಪುಸ್ತಕಗಳ ಅಶ್ಲೀಲ ಬರಹದ ಮಾದರಿಯ ಉದ್ಧರಣ: ಮೇಲ್ಮನೆ ದಿಗ್ಭ್ರಾಂತ
ಬೆಂಗಳೂರು, ಮಾ. 6– ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳ ಪುಸ್ತಕ ಭಂಡಾರಗಳಿಗೆ ಅಧಿಕಾರಿಗಳು ‘ಒತ್ತಾಯ ಪೂರ್ವಕವಾಗಿ ಹೇರುತ್ತಿರುವ’ ಕೆಲವು ಪುಸ್ತಕಗಳಲ್ಲಿನ ‘ಅಶ್ಲೀಲ’ ಬರಹದ ಮಾದರಿಯನ್ನು ಇಂದು ಸದಸ್ಯರೊಬ್ಬರು ತಮ್ಮ ಗಮನಕ್ಕೆ ತಂದಾಗ ಮೇಲ್ಮನೆಯಲ್ಲಿ ಅನೇಕರು ದಿಗ್ಭ್ರಾಂತಿಗೊಂಡರು.