ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನದಿಂದ ವಲಸೆ ಬಂದ 44 ಮಂದಿಗೆ ಭಾರತದ ಪೌರತ್ವ

Last Updated 7 ಮಾರ್ಚ್ 2019, 10:47 IST
ಅಕ್ಷರ ಗಾತ್ರ

ಜೈಪುರ: ಜನವರಿಯಿಂದ ನಡೆದ ವಿಶೇಷ ಅಭಿಯಾನದ ಅಡಿಯಲ್ಲಿ ಪಾಕಿಸ್ತಾನದಿಂದ ವಲಸೆ ಬಂದ 44 ಮಂದಿಗೆ ರಾಜಸ್ಥಾನ ಸರ್ಕಾರವು ಭಾರತದ ಪೌರತ್ವ ನೀಡಿದೆ.

ಪಾಕಿಸ್ತಾನದಿಂದ ಬಂದಿದ್ದ 44 ವಲಸಿಗರು ಹಲವು ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದರು. ಅಂತಹವರಿಗೆ, ದೇಶದ ಪೌರತ್ವ ನೀಡಲಾಗಿದೆಎಂದುಹೆಚ್ಚುವರಿ ಕಾರ್ಯದರ್ಶಿ (ಗೃಹ) ರಾಜೀವ್‌ ಸ್ವರೂ‍ಪ್‌ ತಿಳಿಸಿದ್ದಾರೆ.

ಉದಯ್‌ಪುರದಲ್ಲಿ 15, ಪಾಲಿ 11, ಜಲೋರ್‌ 6, ಹಾಗೂ ಬರ್ಮೇರ್‌ ಜಿಲ್ಲೆಯಲ್ಲಿ 12 ಮಂದಿಗೆ ಪೌರತ್ವ ನೀಡಲಾಗಿದೆ. ಸೂಕ್ತ ದಾಖಲಾತಿ ಸಲ್ಲಿಸದ ಕಾರಣ, ಪೌರತ್ವ ನೀಡುವ ಪ್ರಕ್ರಿಯೆ ವಿಳಂಬವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT