ದೆಹಲಿಯಲ್ಲಿ ಅನಿಲ ಸ್ಫೋಟ: ಮಗು ಸೇರಿ 7 ಜನ ಸಾವು

7

ದೆಹಲಿಯಲ್ಲಿ ಅನಿಲ ಸ್ಫೋಟ: ಮಗು ಸೇರಿ 7 ಜನ ಸಾವು

Published:
Updated:

ನವದೆಹಲಿ: ಪಶ್ಚಿಮ ದೆಹಲಿಯ ಮೋತಿ ನಗರದ ಫ್ಯಾಕ್ಟರಿಯೊಂದರಲ್ಲಿ ಎಲ್‌ಪಿಜಿ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಮಗು ಸೇರಿ  7 ಮಂದಿ ಸಾವಿಗೀಡಾಗಿದ್ದಾರೆ. 

ಗುರುವಾರ ರಾತ್ರಿ ನಡೆದಿರುವ ಸ್ಫೋಟದಿಂದಾಗಿ ಕಟ್ಟಡ ಕುಸಿದ ಸಂಭವಿಸಿದ್ದು, ಈಗಾಗಲೇ 15 ಜನರನ್ನು ರಕ್ಷಿಸಲಾಗಿದೆ. 7–8 ಮಂದಿ ಕಟ್ಟಡದೊಳಗೆ ಸಿಲುಕಿದ್ದಾರೆ.

ಎರಡು ಹಂತದ ಫ್ಯಾಕ್ಟರಿ ಕಟ್ಟಡದಲ್ಲಿ ಸೀಲಿಂಗ್‌ ಫ್ಯಾನ್‌ಗಳಿಗೆ ಪೇಂಟಿಂಗ್‌ ಮಾಡಲಾಗುತ್ತಿತ್ತು. ಅಗ್ನಿಶಾಮಕ ಇಲಾಖೆಗೆ ರಾತ್ರಿ 8:48ಕ್ಕೆ ಅವಘಡದ ಕುರಿತು ಮಾಹಿತಿ ಬಂದಿದ್ದು, 8 ಅಗ್ನಿಶಾಮಕ ವಾಹನಗಳನ್ನು ಕಾರ್ಯಾಚರಣೆ ಕಳುಹಿಸಲಾಗಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !