ನವದೆಹಲಿ: ಮಹಾತ್ಮ ಗಾಂಧಿ 71ನೇ ಪುಣ್ಯ ಸ್ಮರಣೆ ಅಂಗವಾಗಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಮತ್ತುಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ರಾಜ್‌ಘಾಟ್‌ನಲ್ಲಿ ಬುಧವಾರ ರಾಷ್ಟ್ರಪಿತನಿಗೆ ಗೌರವ ನಮನ ಸಲ್ಲಿಸಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಗೌರವ ನಮನ ಸಲ್ಲಿಸಿದರು.

ಗಾಂಧೀಜಿ ಅವರ ನೆಚ್ಚಿನ ಗೀತೆ ‘ರಘುಪತಿ ರಾಘವ ರಾಜಾ ರಾಮ್’ ಅನ್ನು ರಾಜ್‌ಘಾಟ್‌ನಲ್ಲಿ ಹಾಡಲಾಯಿತು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ಗಾಂಧಿ ಸ್ಮಾರಕಕ್ಕೆ ನಮನ ಸಲ್ಲಿಸಿದರು.

‘ಬಾಪು ತೋರಿಸಿದ ಮಾರ್ಗ ಮತ್ತು ಅವರು ನಂಬಿದ್ದ ಮಾರ್ಗ ಅನುಸರಿಸಲು ಬದ್ಧರಿದ್ದೇವೆ ಎಂಬುದನ್ನು ಮತ್ತೊಮ್ಮೆ ಹೇಳುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಉಪ್ಪಿನ ಸತ್ಯಾಗ್ರಹ ಸ್ಮಾರಕ ಲೋಕಾರ್ಪಣೆ

ಮುಂಬೈ: ಗುಜರಾತ್‌ನ ದಂಡಿಯಲ್ಲಿ ಸ್ಥಾಪಿಸಿರುವ ರಾಷ್ಟ್ರೀಯ ಉಪ್ಪಿನ ಸತ್ಯಾಗ್ರಹ ಸ್ಮಾರಕ ಮತ್ತು ವಸ್ತು ಸಂಗ್ರಹಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಹಾತ್ಮ ಗಾಂಧೀಜಿಯವರು ಹುತಾತ್ಮರಾದ 71ನೇ ವರ್ಷಾಚರಣೆ ನಿಮಿತ್ತ ದೇಶಕ್ಕೆ ಅರ್ಪಣೆ ಮಾಡಿದರು.

ಸ್ಮಾರಕವು ಗಾಂಧೀಜಿ ಪ್ರತಿಮೆ ಮತ್ತು 1930ರಲ್ಲಿ ಗಾಂಧೀಜಿ ಅವರ ಜತೆಗೆ ಐತಿಹಾಸಿ ದಂಡಿ ಯಾತ್ರೆಯಲ್ಲಿ ಪಾಲ್ಗೊಂಡ 80 ಸತ್ಯಾಗ್ರಾಹಿಗಳ ಪ್ರತಿಮೆಗಳನ್ನು ಒಳಗೊಂಡಿದೆ. ಐತಿಹಾಸಿಕ ದಂಡಿಯಾತ್ರೆಯ ಕಥೆಗಳು ಮತ್ತು ವಿವಿಧ ಘಟನೆಗಳನ್ನು ವಿವರಿಸುವ 24 ಭಿತ್ತಿಚಿತ್ರಗಳನ್ನು ಇದು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.