ಮತದಾನಕ್ಕೆ 48 ಗಂಟೆ ಮೊದಲು ಜಾಹೀರಾತು ಸ್ಥಗಿತ: ಫೇಸ್‌ಬುಕ್‌ಗೆ ಸೂಚನೆ

7

ಮತದಾನಕ್ಕೆ 48 ಗಂಟೆ ಮೊದಲು ಜಾಹೀರಾತು ಸ್ಥಗಿತ: ಫೇಸ್‌ಬುಕ್‌ಗೆ ಸೂಚನೆ

Published:
Updated:

ನವದೆಹಲಿ: ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನಕ್ಕೆ 48 ಗಂಟೆ ಮುನ್ನ ರಾಜಕೀಯಕ್ಕೆ ಸಂಬಂಧಿಸಿದ ಎಲ್ಲ ಜಾಹೀರಾತುಗಳನ್ನು ತೆಗೆದುಹಾಕಬೇಕು ಎಂದು ಕೇಂದ್ರ ಚುನಾವಣಾ ಆಯೋಗವು ಫೇಸ್‌ಬುಕ್‌ಗೆ ಸೂಚಿಸಿದೆ. 

ಕಲಂ 126ರಡಿ ಇರುವ ಅವಕಾಶಗಳ ಬಗ್ಗೆ ಚರ್ಚಿಸಲು ಆಯೋಗ ರಚಿಸಿರುವ ಸಮಿತಿ ಸಭೆಯು ಜೂನ್ 4ರಂದು ನಡೆಯಿತು. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತ ಮಾಹಿತಿಯನ್ನು ಹಂಚಿಕೊಳ್ಳಲು ಫೇಸ್‌ಬುಕ್‌ನಲ್ಲಿ ಗುಂಡಿಯೊಂದನ್ನು (ಬಟನ್) ಕಲ್ಪಿಸಲು ಸಾಧ್ಯವೇ ಎಂಬ ಬಗ್ಗೆ ಪರಿಶೀಲಿಸುವುದಾಗಿ ಫೇಸ್‌ಬುಕ್ ಪ್ರತಿನಿಧಿ ಭರವಸೆ ನೀಡಿದರು. 

‘ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡುವ ಕಂಟೆಂಟ್ ವಿರುದ್ಧ ದೂರುಗಳು ದಾಖಲಾದರೆ, ಜಾಗತಿಕ ಮಾನದಂಡಗಳ ಆಧಾರದಲ್ಲಿ ಪರಿಶೀಲನೆ ನಡೆಸಲಾಗುವುದು. ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಅವರು ಸಭೆಗೆ ತಿಳಿಸಿದರು.
 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !