‘ಮೆಹಂದಿ’ ಹಚ್ಚಿಕೊಂಡಿದ್ದಕ್ಕೆ ಶಿಕ್ಷೆ: ಪ್ರತಿಭಟನೆ ಬಳಿಕ ಕ್ಷಮೆ ಕೋರಿದ ಶಾಲೆ

7

‘ಮೆಹಂದಿ’ ಹಚ್ಚಿಕೊಂಡಿದ್ದಕ್ಕೆ ಶಿಕ್ಷೆ: ಪ್ರತಿಭಟನೆ ಬಳಿಕ ಕ್ಷಮೆ ಕೋರಿದ ಶಾಲೆ

Published:
Updated:

ಭರೂಚ್‌(ಗುಜರಾತ್‌): ಮೆಹಂದಿ ಹಚ್ಚಿಕೊಂಡು ಶಾಲೆಗೆ ಬಂದಿದ್ದಕ್ಕೆ ಶಿಕ್ಷೆ ಅನುಭವಿಸಿದ್ದ ಕೆಲವು ವಿದ್ಯಾರ್ಥಿಗಳ ಪೋಷಕರು ಪ್ರತಿಭಟನೆ ನಡೆಸಿದ ಬಳಿಕ ಇಲ್ಲಿನ ಖಾಸಗಿ ಶಾಲೆಯೊಂದು ಕ್ಷಮೆ ಕೋರಿದೆ.

ಕ್ರಿಶ್ಚಿಯನ್‌ ಟ್ರಸ್ಟ್‌ ನಡೆಸುತ್ತಿರುವ ಕ್ವೀನ್ಸ್‌ ಆಫ್‌ ಏಂಜಲ್ಸ್‌ ಶಾಲೆಯಲ್ಲಿ ನಡೆದ ಈ ಪ್ರಕರಣ ಇದೀಗ ಸುದ್ದಿಯಾಗಿದೆ.

ಮೆಹಂದಿ ಹಚ್ಚಿಕೊಂಡು ಬಂದಿದ್ದ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗೆ ಪ್ರವೇಶ ನಿರಾಕರಿಸಲಾಗಿತ್ತು. ಈ ವಿಚಾರ ಪೋಷಕರು ಹಾಗೂ ಸ್ಥಳೀಯ ಹಿಂದೂ ಸಂಘಟನೆಗಳಿಗೆ ತಿಳಿದು ಪ್ರತಿಭಟನೆ ನಡೆದಿತ್ತು.

ಬಳಿಕ ಕ್ಷಮೆ ಕೋರಿರುವ ಶಾಲೆಯ ಆಡಳಿತ, ‘ನಾವು ಎಲ್ಲ ಹಬ್ಬಗಳನ್ನೂ ಆಚರಿಸುತ್ತೇವೆ. ವಿದ್ಯಾರ್ಥಿಗಳನ್ನು ಅವರ ಧರ್ಮದ ಆಧಾರದಲ್ಲಿ ಪ್ರತ್ಯೇಕಿಸುವುದಿಲ್ಲ. ಈ ನಿಯಮವನ್ನು ಶಾಲೆಯ ಆರಂಭದಿಂದಲೂ ಅಳವಡಿಸಿಕೊಂಡು ಬರಲಾಗಿದೆ. ನಾವು ಯಾರೊಬ್ಬರನ್ನೂ ಅಮಾನತು ಮಾಡಿಲ್ಲ. ಇಂತಹ ಪ್ರಕರಣಗಳು ಪುನರಾವರ್ತನೆಯಾಗುವುದಿಲ್ಲ’ ಎಂದು ಹೇಳಿಕೆ ನೀಡಿದೆ.

 

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !