ಕಲಂ 35–ಎ ರಕ್ಷಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ: ಫಾರೂಕ್ ಅಬ್ದುಲ್ಲಾ

7
ಜಮ್ಮು–ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಕಲಂ

ಕಲಂ 35–ಎ ರಕ್ಷಿಸದಿದ್ದರೆ ಲೋಕಸಭೆ ಚುನಾವಣೆ ಬಹಿಷ್ಕಾರ: ಫಾರೂಕ್ ಅಬ್ದುಲ್ಲಾ

Published:
Updated:

ಶ್ರೀನಗರ: ಸಂವಿಧಾನದ ಕಲಂ 35–ಎ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಲೋಕಸಭೆ ಚುನಾವಣೆಯನ್ನೂ ಬಹಿಷ್ಕರಿಸಲಿದ್ದೇವೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಶನಿವಾರ ಹೇಳಿದರು.

ಪಕ್ಷದ ಸ್ಥಾಪಕ, ತಮ್ಮ ತಂದೆ ಶೇಖ್ ಮೊಹಮ್ಮದ್ ಅಬ್ದುಲ್ಲಾ ಅವರ 36ನೇ ಪುಣ್ಯ ತಿಥಿ ಅಂಗವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ‘ಕಲಂ 35–ಎ ಬಗ್ಗೆ ನಿಮ್ಮ ನಿಲುವೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರವನ್ನು ದುರ್ಬಲಗೊಳಿಸುವುದೇ ನಿಮ್ಮ ಸಂಚಾದರೆ ನಮ್ಮ ದಾರಿ ಬೇರೆಯೇ ಇದೆ. ನಮಗೆ ಚುನಾವಣೆಯೇ ಬೇಡ. ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಮಾತ್ರವಲ್ಲದೆ, ಲೋಕಸಭೆ ಚುನಾವಣೆಯನ್ನೂ ನಾವು ಬಹಿಷ್ಕರಿಸಲಿದ್ದೇವೆ’ ಎಂದು ಅಬ್ದುಲ್ಲಾ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ನಾಗರಿಕರಿಗೆ ವಿಶೇಷಾಧಿಕಾರ ನೀಡಿರುವ ಕಲಂ 35–ಎ ರಕ್ಷಣೆಗೆ ಆಗ್ರಹಿಸಿ ಪಂಚಾಯಿತಿ ಮತ್ತು ಇತರ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಳನ್ನು ಬಹಿಷ್ಕರಿಸಲು ನ್ಯಾಷನಲ್‌ ಕಾನ್ಫರೆನ್ಸ್ ಇತ್ತೀಚೆಗೆ ನಿರ್ಧರಿಸಿತ್ತು.

ಇದನ್ನೂ ಓದಿ: 35ಎ ಕಲಂ ಅರ್ಜಿ ವಿಚಾರಣೆ 2019 ಜ.9ಕ್ಕೆ ಮುಂದೂಡಿಕೆ

ರಾಜ್ಯದ ಕಾಯಂ ನಿವಾಸಿಗಳನ್ನು, ಅಂದರೆ ಸ್ಥಳೀಯರನ್ನು ಬಿಟ್ಟು ಹೊರಗಿನವರು ಯಾರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಹೊಂದುವಂತಿಲ್ಲ ಎಂಬ ನಿಯಮ ಒಳಗೊಂಡಿರುವ ಕಲಂ 35–ಎ ಸಿಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ.

ಇನ್ನಷ್ಟು...

* ‘35-ಎ’ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್‌

35 ಎ ಕಲಂ ವಿಷಯದಲ್ಲಿ ಎಚ್ಚರದಿಂದ ವ್ಯವಹರಿಸಬೇಕು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !