ಸೋಮವಾರ, ನವೆಂಬರ್ 18, 2019
26 °C

ಏಷ್ಯನ್‌ ಕಪ್‌ ಸೈಕ್ಲಿಂಗ್‌: ಚಿನ್ನ ಗೆದ್ದ ವೆಂಕಪ್ಪ

Published:
Updated:
Prajavani

ಹುಬ್ಬಳ್ಳಿ: ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ವೆಂಕಪ್ಪ ಕೆಂಗಲಗುತ್ತಿ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ಏಷ್ಯನ್‌ ಕಪ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನ ಜೂನಿಯರ್‌ ವಿಭಾಗದಲ್ಲಿ ಮಂಗಳವಾರ ಚಿನ್ನದ ಪದಕ ಜಯಿಸಿದ್ದಾರೆ.

ಮೂರು ಕಿ.ಮೀ. ವೈಯಕ್ತಿಕ ಪರ್ಸೂಟ್‌ ಸ್ಪರ್ಧೆಯಲ್ಲಿ ವೆಂಕಪ್ಪ ಈ ಸಾಧನೆ ಮಾಡುವ ಮೂಲಕ ಡಬಲ್‌ ಗೌರವಕ್ಕೆ ಪಾತ್ರರಾದರು. ಸೋಮವಾರ 10 ಕಿ.ಮೀ. ಸ್ಕ್ರ್ಯಾಚ್ ರೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು.

ಪ್ರತಿಕ್ರಿಯಿಸಿ (+)