ಅಸ್ಸಾಂನಲ್ಲಿ ಇನ್ನೂ ಸಿಗದ ಎನ್‌ಆರ್‌ಸಿ ಅರ್ಜಿ: ಜನರ ನಿರಾಶೆ

7

ಅಸ್ಸಾಂನಲ್ಲಿ ಇನ್ನೂ ಸಿಗದ ಎನ್‌ಆರ್‌ಸಿ ಅರ್ಜಿ: ಜನರ ನಿರಾಶೆ

Published:
Updated:

ಗುವಾಹಟಿ : ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಪರಿಷ್ಕೃತ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನೋಂದಣಿ, ಅಹವಾಲು ಮತ್ತು ಆಕ್ಷೇಪಣಾ ಅರ್ಜಿಗಳು ಸಿಗದೆ ಜನರು ಪರದಾಡುತ್ತಿದ್ದಾರೆ.

ಅರ್ಜಿ ಪಡೆಯಲು ಸೇವಾ ಕೇಂದ್ರಗಳಿಗೆ ಎಡತಾಕುತ್ತಿರುವ ಜನರು ನಿರಾಶೆಯಿಂದ ಬರಿಗೈಯಲ್ಲಿ ಮರಳುತ್ತಿದ್ದಾರೆ.

ಎನ್‌ಆರ್‌ಸಿ ಪ್ರಕಟಿಸಿದ ವೇಳಾಪಟ್ಟಿಯಂತೆ ಆಗಸ್ಟ್‌ 7ರಿಂದ ಅರ್ಜಿಗಳ ವಿತರಣೆ ಆರಂಭವಾಗಬೇಕಿತ್ತು. ಸದ್ಯದ ಮಾಹಿತಿಯಂತೆ ಅರ್ಜಿಗಳು ಸಿಗುವುದು ಇನ್ನೂ ಒಂದು ವಾರ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಎನ್‌ಆರ್‌ಸಿ ಸೇವಾ ಕೇಂದ್ರಗಳ ಸಿಬ್ಬಂದಿ ಶುಕ್ರವಾರದಿಂದ ಜನರಿಗೆ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋದ ಬಗ್ಗೆ ಕಾರಣಗಳನ್ನು ತಿಳಿಸುವ ಕಾರ್ಯ ಆರಂಭಿಸಿದ್ದಾರೆ. ಈ ಪ್ರಕ್ರಿಯೆ ಆರಂಭವಾಗಿ ಈಗಾಗಲೇ ಒಂದು ವಾರವಾಗಿರಬೇಕಿತ್ತು.

ಮಾಹಿತಿ ನೀಡಲು ಹಿಂಜರಿಕೆ
ಸುಪ್ರೀಂ ಕೋರ್ಟ್ ತಪರಾಕಿ ಕಾರಣದಿಂದ ಮಾಧ್ಯಮಗಳ ಜತೆ ಮಾತನಾಡಲು ಎನ್‌ಆರ್‌ಸಿ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ. ಆಗಸ್ಟ್ 16ರಿಂದ ಅರ್ಜಿಗಳ ವಿತರಣೆ ಆರಮಭವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಎನ್ಆರ್‌ಸಿ ಸೇವಾ ಕೇಂದ್ರಗಳು ಆಗಸ್ಟ್ 30ರಿಂದ ಸೆಪ್ಟೆಂಬರ್ 30ರವರೆಗೆ ನೋಂದಣಿ, ಆಕ್ಷೇಪಣಾ ಅಹವಾಲು ಸ್ವೀಕರಿಸಲಿವೆ. ಬಳಿಕ ಎನ್‌ಆರ್‌ಸಿ ಅಂತಿಮ ಪಟ್ಟಿ ತಯಾರಿಸುವ ಪ್ರಕ್ರಿಯೆ ಆರಂಭವಾಗಲಿವೆ.

 

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !