ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಮಪಾತದಲ್ಲಿ ಸಿಲುಕಿದ ಪೊಲೀಸರು: ಮೂವರ ರಕ್ಷಣೆ

Last Updated 8 ಫೆಬ್ರುವರಿ 2019, 16:15 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯ ಜವಾಹರ್‌ ಸುರಂಗದ ಬಳಿ ಭಾರಿ ಹಿಮಪಾತದಲ್ಲಿ ಸಿಲುಕಿದ್ದ ಮೂವರು ಪೊಲೀಸರನ್ನು ರಕ್ಷಿಸಲಾಗಿದೆ.

ಗುರುವಾರ ಸಂಜೆ ಉಂಟಾದ ಹಿಮಪಾತಕ್ಕೆ ಕರ್ತವ್ಯ ನಿರತರಾಗಿದ್ದ ಹತ್ತು ಪೊಲೀಸರು ಸಿಲುಕಿದ್ದರು. ಉಳಿದ ಏಳು ಪೊಲೀಸರ ರಕ್ಷಣೆಗೆ ಭರದ ಕಾರ್ಯಾಚರಣೆ ನಡೆಸಲಾಗುತ್ತಿದೆ.

ವಿಪರೀತ ಗಾಳಿ ಮತ್ತು ಹಿಮದ ರಾಶಿ ಅಧಿಕ ಮಟ್ಟದಲ್ಲಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಬುಧವಾರದಿಂದ ವಿಪರೀತ ಹಿಮಪಾತವಾಗುತ್ತಿದ್ದು, ಕುಲ್ಗಾಂ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಐದು ಅಡಿಯವರೆಗೂ ಹಿಮಪಾತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT