ಮಂಗಳವಾರ, ಮೇ 18, 2021
28 °C
ಹಿಂದೂ ಕಕ್ಷಿದಾರರ ವಾದ

‘ವಿವಾದಿತ ನಿವೇಶನದ ಕೆಳಗೆ ದೇವಾಲಯವಿತ್ತು’

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಅಯೋಧ್ಯೆಯ ವಿವಾದಿತ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ತಮಗೆ ಸೇರಿದ್ದು ಎಂಬ ಮುಸ್ಲಿಂ ಕಕ್ಷಿದಾರರ ವಾದ ಸುಳ್ಳು ಎಂಬುದನ್ನು ಈ ಸ್ಥಳದಲ್ಲಿ ನಡೆಸಿದ ಉತ್ಖನನ ವರದಿ ದೃಢಪಡಿಸಿದೆ.

ಧ್ವಂಸವಾದ ಮಸೀದಿಯ ಅಡಿಯಲ್ಲಿ ಭಾರಿ ದೊಡ್ಡ ಕಟ್ಟಡದ ಅವಶೇಷಗಳು ಸಿಕ್ಕಿವೆ ಎಂದು ಉತ್ಖನನ ವರದಿ ತಿಳಿಸಿದೆ ಎಂದು ರಾಮಲಲ್ಲಾ ಪರ ವಕೀಲ ಸಿ.ಎಸ್‌. ವೈದ್ಯನಾಥನ್‌ ವಾದಿಸಿದ್ದಾರೆ.

ಈ ಕಟ್ಟಡದ ಅವಶೇಷವು ಈದ್ಗಾ ಮೈದಾನದ ಗೋಡೆ ಅಥವಾ  ಮುಸ್ಲಿಂ ಧರ್ಮಕ್ಕೆ ಸಂಬಂಧಿಸಿದ ಬೇರೆ ಕಟ್ಟಡದ್ದು ಎಂಬ ಮುಸ್ಲಿಂ ಕಕ್ಷಿದಾರರ ವಾದವು ಸುಳ್ಳು ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠಕ್ಕೆ ವೈದ್ಯನಾಥನ್‌ ಹೇಳಿದರು. 

ಸ್ತಂಭದ ತಳಗಳು, ಕೆತ್ತನೆ ವಸ್ತುಗಳು, ಇಟ್ಟಿಗೆ ಗೋಡೆಗಳು ಉತ್ಖನನದ ವೇಳೆ ಸಿಕ್ಕಿವೆ. ಇಲ್ಲಿ ಬಹುದೊಡ್ಡ ದೇವಾಲಯ ಇತ್ತು ಎಂಬುದನ್ನು ಇವು ಹೇಳುತ್ತವೆ ಎಂದು ಅವರು ಪ್ರತಿಪಾದಿಸಿದರು. 

‘ಕಟ್ಟಡವೊಂದರ ಅವಶೇಷಗಳು ಮಸೀದಿಯ ಅಡಿಭಾಗದಲ್ಲಿ ಸಿಕ್ಕಿವೆ ಎಂಬ ಮಾಹಿತಿ ಭಾರತೀಯ ಪುರಾತತ್ವ ಸಮೀಕ್ಷೆಯ (ಎಎಸ್‌ಐ) ವರದಿಯಲ್ಲಿ ಇಲ್ಲ. ಬೇರೊಂದು ಕಟ್ಟಡವನ್ನು ಧ್ವಂಸ ಮಾಡಲಾಗಿದೆ ಎಂಬುದಕ್ಕೆ ಆ ವರದಿಯಲ್ಲಿ ಯಾವ ಆಧಾರವೂ ಇಲ್ಲ’ ಎಂದು ಮುಸ್ಲಿಂ ಕಕ್ಷಿದಾರರ ಪರ ವಕೀಲ ರಾಜೀವ್‌ ಧವನ್‌ ವಾದಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು