ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ: ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ಸಲಹೆ

ಮಂಗಳವಾರ, ಜೂನ್ 18, 2019
23 °C

ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ: ಜನಸಂಖ್ಯೆ ನಿಯಂತ್ರಣಕ್ಕೆ ಬಾಬಾ ಸಲಹೆ

Published:
Updated:

ನವದೆಹಲಿ: ದೇಶದ ಜನಸಂಖ್ಯೆ ನಿಯಂತ್ರಿಸುವುದಕ್ಕಾಗಿ ಕುಟುಂಬದ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ, ಸರ್ಕಾರದ ಸೌಲಭ್ಯಗಳನ್ನೂ ಅವರಿಗೆ ನೀಡಬೇಡಿ ಎಂದು ಯೋಗ ಗುರು ಬಾಬಾ ರಾಮದೇವ್ ಸಲಹೆ ನೀಡಿದ್ದಾರೆ.

ದೇಶದಾದ್ಯಂತ ಮದ್ಯದ ಉತ್ಪಾದನೆ, ಮಾರಾಟ ಮತ್ತು ಖರೀದಿಯನ್ನೂ ನಿಷೇಧಿಸಬೇಕು ಎಂದು ರಾಮದೇವ್ ಹೇಳಿದ್ದಾರೆ.

ಭಾನುವಾರ ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಬಾ, ಮುಂದಿನ 50 ವರ್ಷಗಳಲ್ಲಿ ಭಾರತದ ಜನಸಂಖ್ಯೆ 150 ಕೋಟಿ ಮೀರಬಾರದು. ಜನಸಂಖ್ಯಾ ಹೆಚ್ಚಳವನ್ನು ಸಹಿಸಿಕೊಳ್ಳಲು ದೇಶಕ್ಕೆ ಸಾಧ್ಯವಾಗುವುದಿಲ್ಲ. ಕುಟುಂಬದಲ್ಲಿನ ಮೂರನೇ ಮಗುವಿಗೆ ಮತದಾನದ ಹಕ್ಕು ನಿಷೇಧಿಸಿ ಮತ್ತು  ಚುನಾವಣೆಯಲ್ಲಿ ಸ್ಪರ್ಧಿಸದಂತೆ ಇರುವ ಕಾನೂನನ್ನು ದೇಶದಲ್ಲಿ ಜಾರಿಗೆ ತರಬೇಕು. ಸರ್ಕಾರದ ಯಾವುದೇ ಸೌಲಭ್ಯಗಳು ಇವರಿಗೆ ದಕ್ಕದಂತೆ ಮಾಡಿದರೆ ಜನಸಂಖ್ಯೆಯನ್ನು ನಿಯಂತ್ರಿಸಬಹುದು ಎಂದಿದ್ದಾರೆ.

ಅದೇ ವೇಳೆ ಯಾವ ಸಮುದಾಯದವರೇ ಆಗಿರಲಿ ಹೆಚ್ಚು ಮಕ್ಕಳನ್ನು ಹೆರಬಾರದು ಎಂದಿದ್ದಾರೆ ರಾಮದೇವ್.

ಹಸು ಕಳ್ಳ ಸಾಗಾಣಿಕೆ ಮಾಡುವವರ ಮತ್ತು ಗೋರಕ್ಷಕರ ನಡುವಿನ ಸಂಘರ್ಘ ತಡೆಯುವುದಕ್ಕಾಗಿ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದ ಅವರು,  ಮಾಂಸಹಾರವೇ ಬೇಕು ಎನ್ನುವವರಿಗೆ ಹಲವು ರೀತಿಯ ಮಾಂಸಗಳು ಇವೆ ಎಂದಿದ್ದಾರೆ.

ಮುಸ್ಲಿಂ ರಾಷ್ಟ್ರಗಳು ಮದ್ಯ ನಿಷೇಧಿಸಿದೆ. ಮುಸ್ಲಿಂ ರಾಷ್ಟ್ರಗಳು ಈ ರೀತಿ ನಿಷೇಧ ಮಾಡುವುದಾದರೆ ಭಾರತದಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ಭಾರತದಲ್ಲಿ ಮದ್ಯಕ್ಕೆ ಸಂಪೂರ್ಣ ನಿಷೇಧ ಹೇರಬೇಕು ಎಂದು ರಾಮದೇವ್ ಒತ್ತಾಯಿಸಿದ್ದಾರೆ.
 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 19

  Happy
 • 1

  Amused
 • 1

  Sad
 • 4

  Frustrated
 • 8

  Angry

Comments:

0 comments

Write the first review for this !