ಬುಧವಾರ, ಅಕ್ಟೋಬರ್ 16, 2019
22 °C

ನವಲಖಾ ಅರ್ಜಿ ವಿಚಾರಣೆ: ನ್ಯಾಯಪೀಠದಿಂದ ಹಿಂದೆ ಸರಿದ ನ್ಯಾಯಮೂರ್ತಿ ರವೀಂದ್ರ ಭಟ್

Published:
Updated:

ನವದೆಹಲಿ: ಭೀಮಾ ಕೋರೆಗಾಂವ್‌ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ  ನಾಗರಿಕ ಹಕ್ಕುಗಳ ಹೋರಾಟಗಾರ ಗೌತಮ್‌ ನವಲಖಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ  ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ಹಿಂದೆ ಸರಿದಿದ್ದಾರೆ.

 ಸೆಪ್ಟೆಂಬರ್ 30ರಂದು  ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರು ಈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು. 

ಇದನ್ನೂ ಓದಿಭೀಮಾ ಕೋರೆಗಾಂವ್‌ ಪ್ರಕರಣ: ಹಿಂದೆ ಸರಿದ ಸಿಜೆಐ

ಆಮೇಲೆ ನ್ಯಾಯಪೀಠದಲ್ಲಿದ್ದ  ನ್ಯಾಯಮೂರ್ತಿ ಎನ್.ವಿ.ರಮಣ, ಆರ್. ಸುಭಾಷ್ ರೆಡ್ಡಿ ಮತ್ತು ಬಿ.ಆರ್. ಗಾವೈ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದಿದ್ದರು. 

ಗುರುವಾರ ಈ  ಅರ್ಜಿ ವಿಚಾರಣೆ ನಡೆಯುವ ಮುನ್ನ ಅರುಣ್ ಮಿಶ್ರಾ, ವಿನೀತ್ ಸರಣ್ ಮತ್ತು ಎಸ್. ರವೀಂದ್ರ ಭಟ್ ನ್ಯಾಯಪೀಠದಲ್ಲಿದ್ದರು. ಆದರೆ ವಿಚಾರಣೆಗೆ ಮುನ್ನ ಭಟ್ ಹಿಂದೆ ಸರಿದಿದ್ದಾರೆ. 

ನವಲಖಾ ಅವರಿಗೆ ಬಾಂಬೆ ಹೈಕೋರ್ಟ್‌ ನೀಡಿದ್ದ ಮೂರು ವಾರಗಳ ಭದ್ರತೆ ಅವಧಿ ಶುಕ್ರವಾರ ಅಂತ್ಯಗೊಳ್ಳಲಿದೆ ಎಂದು  ನ್ಯಾಯಪೀಠವು ನವಲಖಾ ಅವರ ಸಲಹೆಗಾರರಿಗೆ ಹೇಳಿದ್ದು, ಅರ್ಜಿ ವಿಚಾರಣೆಯನ್ನು ಇನ್ನೊಂದು ನ್ಯಾಯಪೀಠ ಅಕ್ಟೋಬರ್ 4, ಶುಕ್ರವಾರದಂದು ನಡೆಸಲಿದೆ ಎಂದಿದೆ.

ಇದನ್ನೂ ಓದಿಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣ: ಗೃಹ ಬಂಧನದಿಂದ ಗೌತಮ್‌ ನವಲಖಾ ಬಿಡುಗಡೆ

Post Comments (+)