ಶನಿವಾರ, ಜೂನ್ 19, 2021
22 °C

ಭೀಮಾ ಕೋರೆಗಾಂವ್: ಮೂವರ ಬಂಧನಕ್ಕೆ ತಡೆ ವಿಸ್ತರಿಸಿದ ಬಾಂಬೆ ಹೈಕೋರ್ಟ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಆರೋಪಿಗಳ ಪೈಕಿ ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವಾಲಖಾ, ನಾಗರಿಕ ಹಕ್ಕುಗಳ ಹೋರಾಟಗಾರ ಆನಂದ್ ತೆಲ್ತುಂಬೆ, ಸಾಮಾಜಿಕ ಕಾರ್ಯಕರ್ತ ಸ್ಟಾನ್ ಸ್ವಾಮಿ ಅವರ ಬಂಧನಕ್ಕೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ಬಾಂಬೆ ಹೈಕೋರ್ಟ್ ನ.21ರವರೆಗೆ ವಿಸ್ತರಿಸಿದೆ.

 ಮಾನವ ಹಕ್ಕು ಹೋರಾಟಗಾರ್ತಿ ಸುಧಾ ಭಾರದ್ವಾಜ್, ಗೌತಮ್ ನವಾಲಖಾ, ನಿವೃತ್ತ ಪ್ರಾಧ್ಯಾಪಕ ವರ್ನಾನ್ ಗೋನ್ಸಾಲ್ವೆಸ್, ರಾಜಕೀಯ ಚಿಂತಕ ಮತ್ತು ವಕೀಲ ಅರುಣ್ ಫೆರೇರಾ, ಕ್ರಾಂತಿಕಾರಿ ಬರಹಗಾರ ಮತ್ತು ಕವಿ ವರವರರಾವ್ ಅವರನ್ನು ಆಗಸ್ಟ್ 29ರಂದು ಬಂಧಿಸಿ ನಂತರ ಗೃಹ ಬಂಧನದಲ್ಲಿರಿಸಲಾಗಿತ್ತು.

ಜೊತೆಗೆ ಆನಂದ್ ತೆಲ್ತುಂಬೆ ಹಾಗೂ ಸ್ಟಾನ್ ಸ್ವಾಮಿ ಅವರ ಮೇಲೆ ದಾಳಿ ನಡೆಸಿದರೂ ಬಂಧನಕ್ಕೊಳಪಡಿಸಿರಲಿಲ್ಲ. ಇನ್ನು ಗೃಹಬಂಧನದಲ್ಲಿರುವ ಐವರ ಪೈಕಿ ಗೌತಮ್‌ ನವಲಖಾ ಅವರನ್ನು ಕಳೆದ ತಿಂಗಳು ದೆಹಲಿ ಹೈಕೋರ್ಟ್ ಗೃಹಬಂಧನದಿಂದ ಬಿಡುಗಡೆಗೊಳಿಸಿತ್ತು.

ಇನ್ನಷ್ಟು...
ಬಂಧನ ಪರ್ವ: ಪೊಲೀಸರ ವಶದಲ್ಲಿರುವವರ ಇತ್ಯೋಪರಿ
ನಕ್ಸಲ್‌ ನಂಟು ಆರೋಪದಲ್ಲಿ ಐವರ ಬಂಧನ ಪ್ರಕರಣ: ’ಸೆರೆಮನೆ ಬದಲು ಮನೆಸೆರೆ’
ಮೋದಿ ಹತ್ಯೆಗೆ ಸಂಚು: ಕವಿ ವರ ವರರಾವ್ ಬಂಧನ, ಟೀಕೆ

ಭೀಮಾ ಕೋರೆಗಾಂವ್ ಪ್ರಕರಣದ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್
ನಕ್ಸಲ್‌ ನಂಟು ಆರೋಪದಲ್ಲಿ ಐವರ ಬಂಧನ ಪ್ರಕರಣ: ’ಸೆರೆಮನೆ ಬದಲು ಮನೆಸೆರೆ’
ಹೋರಾಟಗಾರರ ಬಂಧನ ಪ್ರಕರಣ: ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು