‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’: ಎಫ್‌ಐಆರ್‌ಗೆ ಆದೇಶ

7

‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’: ಎಫ್‌ಐಆರ್‌ಗೆ ಆದೇಶ

Published:
Updated:
Prajavani

ಮುಜಫ್ಫರ್‌ಪುರ್‌, ಬಿಹಾರ: ‘ಆ್ಯಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಚಲನಚಿತ್ರದಲ್ಲಿ ನಟಿಸಿದ ಅನುಪಮ್‌ ಖೇರ್‌, ಅಕ್ಷಯ್‌ ಖನ್ನಾ ಮತ್ತು ಈ ಚಿತ್ರಕ್ಕೆ ಸಂಬಂಧಪಟ್ಟ ಇತರೆ 15 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲು ಇಲ್ಲಿನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

‘ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿನ ಘಟನಾವಳಿ ಕುರಿತು ಈ ಸಿನಿಮಾ ನಿರ್ಮಾಣವಾಗಿದೆ. ಈ ಸಿನಿಮಾದಲ್ಲಿ ಸಿಂಗ್‌ ಹಾಗೂ ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಗೌರವಕ್ಕೆ ಧಕ್ಕೆ ತರಲಾಗಿದೆ. ಆದ್ದರಿಂದ ಈ ಚಿತ್ರಕ್ಕೆ ಸಂಬಂಧಿಸಿದವರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಬೇಕು’ ಎಂದು ಕೋರಿ ವಕೀಲ ಸುಧೀರ್‌ ಕುಮಾರ್‌ ಓಝಾ ಎಂಬುವರು ನ್ಯಾಯಾಲಯದಲ್ಲಿ ಜನವರಿ 2 ರಂದು ದೂರು ಸಲ್ಲಿಸಿದ್ದರು.

ಈ ದೂರಿನ ವಿಚಾರಣೆ ನಡೆಸಿದ ಉಪ ವಿಭಾಗೀಯ ನ್ಯಾಯಾಧೀಶ (ಪೂರ್ವ) ಗೌರವ್‌ ಕಮಲ್‌ ಅವರು ಎಫ್‌ಐಆರ್‌ ದಾಖಲಿಸುವಂತೆ ಕಾಂತಿ ಪೊಲೀಸ್‌ ಠಾಣೆಗೆ ಆದೇಶಿಸಿದರು.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !