ತಪ್ಪು ಮಾಡಿದರೆ ದಂಡವಾಗಿ ಮದ್ಯ ನೀಡುವ ಶಿಕ್ಷೆ!

7
ಇದು ಜಾರ್ಖಂಡ್‌ನ ಚಲ್ಕಾರಿ ಊರಿನ ಕತೆ

ತಪ್ಪು ಮಾಡಿದರೆ ದಂಡವಾಗಿ ಮದ್ಯ ನೀಡುವ ಶಿಕ್ಷೆ!

Published:
Updated:

ಧನಬಾದ್, ಜಾರ್ಖಂಡ್: ನೆರೆಮನೆಯವನ ಜೊತೆ ಕಾದಾಟಕ್ಕೆ ಇಳಿದಿದ್ದ ದಲು ಬೀರಹೋರ ಎಂಬಾತ ತಪ್ಪಿತಸ್ಥ ಎಂದು ತೀರ್ಮಾನಿಸಿದ ಸಮುದಾಯದ ಮುಖಂಡರು, ಎರಡು ಬಾಟಲ್ ಮದ್ಯವನ್ನು ದಂಡದ ರೂಪದಲ್ಲಿ ನೀಡುವಂತೆ ಆತನಿಗೆ ಆದೇಶಿಸಿದ್ದರು. ಸಾಮಗ್ರಿಗಳನ್ನು ಕದ್ದಿದ್ದ ತಪ್ಪಿಗೆ ಎರಡು ಕೋಳಿ ಹಾಗೂ ಮೂರು ಬಾಟಲ್ ಮದ್ಯ ನೀಡುವಂತೆ ರಖಾ ಎಂಬಾತನಿಗೆ ಆದೇಶಿಸಲಾಗಿತ್ತು. 

ಇದು ಜಾರ್ಖಂಡ್‌ನ ಚಲ್ಕಾರಿ ಎಂಬ ಊರಿನ ಕತೆ. ಸ್ಥಳೀಯ ಸಮುದಾಯ ನ್ಯಾಯಾಲಯದ ಆದೇಶದ ಮೇರೆಗೆ ಬೀರಹೋರ ಬುಡಕಟ್ಟು ಸಮುದಾಯದ ಜನರು ಮದ್ಯದ ಬಾಟಲ್‌ಗಳನ್ನು ದಂಡದ ರೂಪದಲ್ಲಿ ನೀಡುತ್ತಾರೆ. ತಮ್ಮ ಪೂರ್ವಜರು ರೂಪಿಸಿದ್ದ ನಿಯಮಗಳನ್ನು ಈ ಬುಡಕಟ್ಟು ಜನರು ಪಾಲಿಸುತ್ತಾ ಬಂದಿದ್ದಾರೆ ಎನ್ನುತ್ತಾರೆ ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್. 

ಯಾವುದೇ ಅಪರಾಧ ನಡೆದರೂ ಇಲ್ಲಿನ ಜನರು ತಾಲ್ಲೂಕು ಅಥವಾ ಜಿಲ್ಲಾ ನ್ಯಾಯಾಲಯಗಳನ್ನು ಸಂಪರ್ಕಿಸುವುದಿಲ್ಲ. ಬದಲಾಗಿ ಸಮುದಾಯದ ಸ್ಥಳೀಯ ನ್ಯಾಯಾಲಯದಲ್ಲೇ ಬಗೆಹರಿಸಿಕೊಳ್ಳುತ್ತಾರೆ. ಈ ಆದೇಶಗಳನ್ನು ಯಾರೂ ಪ್ರಶ್ನಿಸುವುದಿಲ್ಲ.

ತಮ್ಮ ಸಂಪ್ರದಾಯದ ಬಗ್ಗೆ ಸಮುದಾಯದ ಹಿರಿಯರಿಗೆ ಗೌರವವಿದೆ. ರೂಪಿಸಿಕೊಂಡಿರುವ ನೀತಿ ನಿಯಮಗಳು ಇಡೀ ವರ್ಷ ಶಾಂತಿ, ನೆಮ್ಮದಿಯಿಂದ ಜೀವಿಸಲು ನೆರವಾಗಿವೆ ಎನ್ನುತ್ತಾರೆ ಹಿರಿಯ ಮುಖಂಡ ರಾಕಾ ಬೀರಹೋರ. ಕೃತ್ಯದ ಪ್ರಮಾಣ ಆಧರಿಸಿ ಶಿಕ್ಷೆ ನಿಗದಿಯಾಗುತ್ತದೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !