ಒಟ್ಟಿಗೆ ಚುನಾವಣೆಗೆ ಬಿಜೆಡಿ ಒತ್ತಾಯ

7
ಒಡಿಶಾ: ಬಿಜೆಡಿ ನಾಯಕರ ನಿಯೋಗದಿಂದ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ

ಒಟ್ಟಿಗೆ ಚುನಾವಣೆಗೆ ಬಿಜೆಡಿ ಒತ್ತಾಯ

Published:
Updated:

ನವದೆಹಲಿ: ಅವಧಿಗಿಂತ ಮೊದಲೇ ಲೋಕಸಭಾ ಚುನಾವಣೆ ನಡೆದರೆ, ಅದರ ಜೊತೆಗೆಯೇ ಒಡಿಶಾ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ಬಿಜು ಜನತಾ ದಳ (ಬಿಜೆಡಿ) ಚುನಾವಣಾ ಆಯೋಗವನ್ನು ಒತ್ತಾಯಿಸಿದೆ.

ಏಕಕಾಲಕ್ಕೆ ಚುನಾವಣೆ ನಡೆದರೆ ₹1,000 ಕೋಟಿ ರಾಜ್ಯಕ್ಕೆ ಉಳಿತಾಯವಾಗಲಿದೆ ಎಂದು ಬಿಜೆಡಿ ಹೇಳಿದೆ.

2004ರಿಂದಲೂ ಲೋಕಸಭೆ ಮತ್ತು ಒಡಿಶಾ ವಿಧಾನಸಭೆಗೆ ಜತೆಯಾಗಿಯೇ ಚುನಾವಣೆ ನಡೆಯುತ್ತಿದೆ. ಹಾಗಾಗಿ ಈ ಬಾರಿಯೂ ಲೋಕಸಭೆ ಮತ್ತು ಒಡಿಶಾ ವಿಧಾನಸಭೆಯ ಅವಧಿ ಏಕಕಾಲಕ್ಕೆ ಪೂರ್ಣಗೊಳ್ಳಲಿದೆ.

ಈ ಬಾರಿ ಲೋಕಸಭಾ ಚುನಾವಣೆ ಅವಧಿಗಿಂತ ಮುನ್ನವೇ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಹಾಗಾದರೆ, ಲೋಕಸಭೆಯ ಜತೆಗೆ ವಿಧಾನಸಭೆಗೂ ಚುನಾವಣೆ ನಡೆಸಬೇಕು ಎಂದು ಆಯೋಗಕ್ಕೆ ಬಿಜೆಡಿ ಮನವಿ ಮಾಡಿದೆ.

ಬಿಜೆಡಿಯ ಹಿರಿಯ ಸಂಸದ ಪಿನಾಕಿ ಮಿಶ್ರಾ ನೇತೃತ್ವದಲ್ಲಿ ನಿಯೋಗವೊಂದು ಆಯೋಗದ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !