ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಬಂದು ಹೋದ ಮೇಲೆ, ಅಣಬೆಗಳ ಮಾಯಾಲೋಕ!

Last Updated 1 ಜೂನ್ 2018, 10:51 IST
ಅಕ್ಷರ ಗಾತ್ರ

ಹೆಬ್ರಿ: ಬೇಸಿಗೆಯ ಬಿರುಬಿಸಿಲಿನಲ್ಲಿ ಭೂದೇವಿಯ ಗರ್ಭದೊಳಗೆ ಹುದುಗಿದ್ದು ಪ್ರಪಂಚದ ಬೆಳಕು ಕಾಣಬಹು
ದಾದ ಅದೆಷ್ಟೋ ಸಸ್ಯಸಂಕುಲ, ಜೀವಿಗಳಿಗೆ ಮಳೆಯ ಸಿಂಚನ ಪಕ್ವಕಾಲ. ಭೂಮಿಗೆ ಮೊದಲ ಮಳೆ ಬಂದ ಮೇಲೆ ಸುವಾಸನೆಯ ಅನುಭವವಾಗುತ್ತದೆ.

ಕಾಡಿನ ಹಾಡಿಯ ಹಾದಿಯಲ್ಲಿ ನಡೆಯುವಾಗಲೆಲ್ಲ ಆಗತಾನೆ ಮೊಳಕೆ ಒಡೆದ ಹೂ ಗಿಡ, ಗೆಡ್ಡೆಗಳ ಮೊಗ್ಗಿನ ಚಿಗುರಿನ ಪರಿಮಳ ಮನಸೂರೆಗೊಳ್ಳುತ್ತದೆ. ಅಂತೆಯೇ, ಮಳೆಯ ಕಾರಣ ಬೆಳೆದುನಿಂತಿರುವ ಬಣ್ಣದ ಅಣಬೆಗಳ ಮಾಯಾಲೋಕ ಸಹೃದಯಿಗಳನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುತ್ತದೆ. ಸವಿಯಲು ರುಚಿಯಾದ ಕಲ್ಲಣಬೆ, ಹೊಯಿಗೆ ಅಣಬೆಗಳ ರಾಶಿ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಈ ಬಾರಿ ಮುಂಗಾರು ಪೂರ್ವ ಮಳೆ ಅತಿಯಾಗಿ ಬಂದಿದ್ದರಿಂದ ಕಲ್ಲಣಬೆ ಸಹಿತ ಇನ್ನಿತರ ಅಣಬೆಗಳು ಮೊಳಕೆ ಒಡೆದು ಅಷ್ಟೇ ಬೇಗ ಹಾಳಾಗಿವೆ. ಕಳೆದ ವರ್ಷದಷ್ಟು ಕಲ್ಲಣಬೆಗಳು ಅಣಬೆಪ್ರಿಯರ ಬಾಯಿ ಸೇರಿಲ್ಲ ಎಂಬುದೇ ದುಃಖದ ಸಂಗತಿ.

ಸುಕುಮಾರ್ ಮುನಿಯಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT