ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

7

ಬುಲಂದ್‌ಶಹರ್‌ ಗುಂಪುದಾಳಿ: ಗುಂಡು ಹಾರಿಸಿದ್ದು ಯೋಧ?

Published:
Updated:

ಲಖನೌ: ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯ ಚಿಂಗರ್‌ವಾಟಿ ಪೊಲೀಸ್‌ ಹೊರಠಾಣೆ ಮೇಲೆ ನಡೆದ ಗುಂಪು ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸುಬೋಧ್ ಕುಮಾರ್ ಸಿಂಗ್ ಮತ್ತು ಸ್ಥಳೀಯ ನಿವಾಸಿ ಸುಮಿತ್ ಕುಮಾರ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಬುಲಂದ್‌ಶಹರ್‌ ಗುಂಪುದಾಳಿ ನಡೆಯುತ್ತಿದ್ದ ವೇಳೆ ಯೋಧನೊಬ್ಬ ಗುಂಡು ಹಾರಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದ್ದು, ಈ ಬಗ್ಗೆ ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿ ಪ್ರಕಾರ ಸ್ಥಳೀಯ ನಿವಾಸಿಯಾದ ಯೋಧನೊಬ್ಬ ಗುಂಡು ಹಾರಿಸಿದ್ದು, ಪೊಲೀಸ್ ಅಧಿಕಾರಿ ಹತ್ಯೆಯಲ್ಲಿ ಆತನ ಕೈವಾಡ ಇದೆಯೇ ಎಂಬುದು ದೃಢೀಕರಿಸಲ್ಪಟ್ಟಿಲ್ಲ.

ಪ್ರಕರಣ ನಡೆದಂದಿನಿಂದ ಆ ಯೋಧ ತಲೆಮರೆಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತ  ರಜೆಯಲ್ಲಿ ಊರಿಗೆ ಬಂದು ರಜೆ ಮುಗಿಸಿ ಜಮ್ಮುವಿಗೆ ಮರಳಿದ್ದಾನೆ ಎಂದು ಯೋಧನ ಕುಟುಂಬದವರು ಹೇಳಿದ್ದಾರೆ. ಏತನ್ಮಧ್ಯೆ,ಜಮ್ಮು ಕಾಶ್ಮೀರದ ಸೇನಾಧಿಕಾರಿಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 
ಈ ವಿಡಿಯೊದಲ್ಲಿರುವ ಎಲ್ಲ ವ್ಯಕ್ತಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಡಿಜಿಪಿ ಕಾರ್ಯಾಲಯದ ವಕ್ತಾರ ಆರ್. ಕೆ. ಗೌತಮ್  ಹೇಳಿದ್ದಾರೆ.

ಇದನ್ನೂ ಓದಿ

ಗೋಹತ್ಯೆ ಗಲಭೆ: ಸುಬೋಧ್ ಸಿಂಗ್ ಹತ್ಯೆಯ ಹಿಂದೆ ಪಿತೂರಿ?

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !