ಲಖನೌ ಸಮೀಪ ಬಸ್ ಅಪಘಾತ-7 ಮಂದಿ ಸಾವು, 34 ಮಂದಿಗೆ ಗಾಯ

ಶುಕ್ರವಾರ, ಮೇ 24, 2019
26 °C

ಲಖನೌ ಸಮೀಪ ಬಸ್ ಅಪಘಾತ-7 ಮಂದಿ ಸಾವು, 34 ಮಂದಿಗೆ ಗಾಯ

Published:
Updated:
Prajavani

ಉತ್ತರಪ್ರದೇಶ: ಇಲ್ಲಿನ ಆಗ್ರಾ- ಲಖನೌ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಏಳು ಮಂದಿ ಮೃತಪಟ್ಟು 34 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.

ಲಾರಿ ಹಾಗೂ ಬಸ್‌ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬಸ್ ಜಖಂಗೊಂಡಿದ್ದು, ನಿದ್ರೆಗೆ ಜಾರಿದ್ದ ಪ್ರಯಾಣಿಕರಲ್ಲಿ ಏಳು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಅಲ್ಲದೆ, ಉಳಿದ 34 ಮಂದಿಗೆ ತೀವ್ರಗಾಯಗಳಾಗಿವೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಇದು ಎಕ್ಸ್ ಪ್ರೆಸ್ ಹೆದ್ದಾರಿಯಾಗಿದ್ದು, ವಾಹನಗಳು ಅತಿವೇಗದಿಂದ ದಿನದ 24ಗಂಟೆಗಳೂ ಸಂಚರಿಸುತ್ತವೆ. ಘಟನೆಯಲ್ಲಿ ಮೃತಪಟ್ಟವರ ಹೆಸರು ವಿಳಾಸ ಸದ್ಯಕ್ಕೆ ತಿಳಿದುಬಂದಿಲ್ಲ. ಮೇನ್ ಪುರಿ ಸಮೀಪ ಈ ಘಟನೆ ಸಂಭವಿಸಿದ್ದು, ವಿಷಯ ತಿಳಿದ ಕೂಡಲೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಬಸ್‌ನ ತುಂಬಾ ಪ್ರಯಾಣಿಕರು ತುಂಬಿದ್ದು, ಎಲ್ಲಿಂದ ಎಲ್ಲಿಗೆ ಹೋಗುತ್ತಿತ್ತು ಎಂಬುದರ ಬಗ್ಗೆ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !