ಶನಿವಾರ, ನವೆಂಬರ್ 23, 2019
18 °C

ಚೆನ್ನೈ: ನೇಣಿಗೆ ಶರಣಾದ ಮಹಿಳಾ ಉದ್ಯಮಿ

Published:
Updated:

ಚೆನ್ನೈ : ಚೆನ್ನೈ ಮೂಲದ ಮಹಿಳಾ ಉದ್ಯಮಿಯೊಬ್ಬರು ಇಲ್ಲಿನ ಕೊಠಾರಿ ರಸ್ತೆ ಪ್ರದೇಶದಲ್ಲಿರುವ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹದಿಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಲ್ಯಾನ್ಸನ್‌ ಟೊಯೋಟಾದ ಜಂಟಿ ಅಧ್ಯಕ್ಷೆ ರೀಟಾ ಲಂಕಾಲಿಂಗಂ (49) ಆತ್ಮಹತ್ಯೆ ಮಾಡಿಕೊಂಡವರು. ಬೆಳಿಗ್ಗೆ 9 ಗಂಟೆಯಾದರೂ ಅವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ನಂತರ ಮನೆಗೆ ಬಂದ ಅವರ ಸಂಸ್ಥೆಯ ಉದ್ಯೋಗಿಯೊಬ್ಬರು ನೇಣು ಹಾಕಿಕೊಂಡಿದ್ದು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ‘ರೀಟಾ ಹಾಗೂ ಪತಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಲಂಕಾಲಿಂಗಂ ಮುರುಗೇಸು ಅವರ ಮಧ್ಯೆ ಬುಧವಾರ ವಾಗ್ವಾದ ನಡೆದಿತ್ತು’ ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)