ಸೋಮವಾರ, ಫೆಬ್ರವರಿ 24, 2020
19 °C

ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ:  ಶಿಲ್ಲಾಂಗ್ ಭೇಟಿ ರದ್ದು ಮಾಡಿದ ಅಮಿತ್ ಶಾ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Amit Shah

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಪ್ರತಿಭಟನೆ ಮುಂದುವರಿದಿರುವ ಕಾರಣ ಗೃಹ ಸಚಿವ ಅಮಿತ್ ಶಾ, ಶಿಲ್ಲಾಂಗ್, ಮೇಘಾಲಯ ಭೇಟಿ ರದ್ದು ಮಾಡಿದ್ದಾರೆ.

ಭಾನುವಾರ ಶಿಲ್ಲಾಂಗ್‌‌ನಲ್ಲಿರುವ ಈಶಾನ್ಯ ಪೊಲೀಸ್ ಅಕಾಡೆಮಿಗೆ ಮತ್ತು ಸೋಮವಾರ ತವಾಂಗ್‌ಗೆ ಅಮಿತ್ ಶಾ ಭೇಟಿ  ನಿಗದಿಯಾಗಿತ್ತು. ಆದರೆ ಇಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದಿರುವುದರಿಂದ ಭೇಟಿಯನ್ನು ರದ್ದು ಮಾಡಲಾಗಿದೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರತಿಭಟನೆ: ಜಪಾನ್ ಪ್ರಧಾನಿಯ ಭಾರತ ಪ್ರವಾಸ ರದ್ದಾಗುವ ಸಾಧ್ಯತೆ

ಮೂಲಗಳ ಪ್ರಕಾರ ಶಾ ಅವರು ಶನಿವಾರ ಮತ್ತು ಸೋಮವಾರ ಜಾರ್ಖಂಡ್‌‌ನಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು