ಬುಧವಾರ, ಅಕ್ಟೋಬರ್ 21, 2020
25 °C

ಭಾರತೀಯ ರೈಲ್ವೆಯಲ್ಲಿ 409 ಕಿ.ಮೀ ವೇಗದ ರೈಲು; ಸಂಚಾರ ಮಾಹಿತಿ ಕಂಡು ದಂಗಾದ ಸಿಎಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಭಾರತೀಯ ರೈಲ್ವೆಯಲ್ಲಿ ಗಂಟೆಗೆ 409 ಕಿ.ಮೀ ವೇಗದಲ್ಲಿ ಚಲಿಸಿ 116 ಕಿ.ಮೀ. ದೂರವನ್ನು 17 ನಿಮಿಷಗಳಲ್ಲಿ ತಲುಪುವ ಎಕ್ಸ್‌ಪ್ರೆಸ್‌ ರೈಲು ಸಂಚಾರವಿದೆ!

2022ರ ವೇಳೆಗೆ ವಾಸ್ತವವಾಗಿ ಬುಲೆಟ್‌ ರೈಲು ಸಂಚಾರ ಸಾಧ್ಯವಾಗಬಹುದು. ಆದರೆ, ಈಗಾಗಲೇ ಉತ್ತರ ಪ್ರದೇಶದಲ್ಲಿ ಭಾರತೀಯ ರೈಲ್ವೆಯ ಬುಲೆಟ್‌ ರೈಲು ಸಂಚಾರಿಸುತ್ತಿದೆ. ಭಾರತದ ಮಹಾಲೇಖಪಾಲ(ಸಿಎಜಿ) ಪರಿಶೀಲನೆ ವೇಳೆ ರೈಲ್ವೆ ಸಮಯ–ಸಂಚಾರದಲ್ಲಿನ ವ್ಯತ್ಯಾಸದಲ್ಲಿ ಈ ಅಂಶ ಗುರುತಿಸಲಾಗಿದೆ.

ಫತೇಪುರ್‌ ಮತ್ತು ಅಲಹಾಬಾದ್‌ ನಡುವಿನ 116 ಕಿ.ಮೀ. ದೂರವನ್ನು 17 ನಿಮಿಷಗಳಲ್ಲಿ ಪೂರೈಸಿರುವ ಮಾಹಿತಿಗೆ ಸಿಎಜಿ ಅಚ್ಚರಿ ವ್ಯಕ್ತಪಡಿಸಿದೆ. ರೈಲು ಗಂಟೆಗೆ 130 ಕಿ.ಮೀ. ಗರಿಷ್ಠ ವೇಗದಲ್ಲಿ ಸಂಚರಿಸಿದರೂ ಅಲಹಾಬಾದ್‌–ಫತೇಪುರ್‌ ಮಾರ್ಗದಲ್ಲಿ ಸಂಚಾರ ಪೂರ್ಣಗೊಳಿಸಲು ಕನಿಷ್ಠ 53 ನಿಮಿಷ ಅಗತ್ಯವಿದೆ. ಆದರೆ, ರೈಲ್ವೆ ದಾಖಲಿಸಿರುವ ಮಾಹಿತಿ ಪ್ರಕಾರ 2016ರ ಜುಲೈ 9ರಂದು  ಅಲಹಾಬಾದ್ ದುರಂತೋ ಎಕ್ಸ್‌ಪ್ರೆಸ್‌ ಬೆಳಿಗ್ಗೆ 5:53ಕ್ಕೆ ಫತೇಪುರ್‌ ತಲುಪಿದೆ ಹಾಗೂ 6:10ಕ್ಕೆ ಅಲಹಾಬಾದ್‌ ಮುಟ್ಟಿದೆ. ಲೆಕ್ಕಾಚಾರದ ಪ್ರಕಾರ ಇಷ್ಟು ಸಮಯದಲ್ಲಿ ಆ ಅಂತರವನ್ನು ತಲುಪಲು ರೈಲು ಗಂಟೆಗೆ 409 ಕಿ.ಮೀ. ವೇಗದಲ್ಲಿ ನುಗ್ಗಬೇಕಾಗುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿದೆ. 

ಪ್ರಯಾಗ್‌ ರಾಜ್‌ ಎಕ್ಸ್‌ಪ್ರೆಸ್‌, ಜೈಪುರ–ಅಲಹಾವಾದ್‌ ಎಕ್ಸ್‌ಪ್ರೆಸ್‌ ಹಾಗೂ ನವದೆಹಲಿ ಸೇರಿ ಮೂರು ರೈಲುಗಳ ಸಂಚಾರ ಮತ್ತು ಸಮಯದ ಲೆಕ್ಕ ಪರಿಶೋಧನೆಯನ್ನು ಸಿಎಜಿ ನಡೆಸಿದೆ. ಪ್ರಯಾಣಿಕರು ಆನ್‌ಲೈನ್‌ ಮೂಲಕವೇ ರೈಲುಗಳ ಸಮಯವನ್ನು ತಿಳಿಯಬಹುದಾದ ಐಸಿಎಂಎಸ್‌ ವ್ಯವಸ್ಥೆ ಇದ್ದು, ಭಾರತೀಯ ರೈಲ್ವೆ ಒದಗಿಸುವ ಮಾಹಿತಿಯ ಸಮಗ್ರತೆಯನ್ನು ಸಿಎಜಿ ಪ್ರಶ್ನಿಸಿದೆ. 

ನ್ಯಾಷನಲ್‌ ಟ್ರೇನ್‌ ಎನ್‌ಕ್ವೈರಿ ಸಿಸ್ಟಂ(ಎನ್‌ಟಿಇಎಸ್‌)ನಲ್ಲಿಯೂ ರೈಲುಗಳ ಮಾಹಿತಿ ಲಭ್ಯವಿದ್ದು, ಅಲಹಾಬಾದ್‌ ರೈಲು ನಿಲ್ದಾಣಕ್ಕೆ ಆಗಮಿಸುವ ರೈಲುಗಳ ಸಮಯ ವ್ಯತ್ಯಯಲು ಬಹುವಾಗಿ ಪ್ರಯಾಣಿಕರನ್ನು ಬಾದಿಸುತ್ತಿದೆ. ಸಿಬ್ಬಂದಿ ಮಾಹಿತಿ ನಮೂದಿಸುವಾಗ ಆಗಿರುವ ವ್ಯತ್ಯಾಸ ಇದಾಗಿದೆ. ಇಂಥ ತಪ್ಪುಗಳನ್ನು ತಡೆಯಲು ಸೂಕ್ತ ಕ್ರಮ ವಹಿಸುವುದಾಗಿ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು