ದೆವರಿಯಾ ಲೈಂಗಿಕ ದೌರ್ಜನ್ಯ ಪ್ರಕರಣ: ಸಿಬಿಐ ತನಿಖೆಗೆ

7
ನಾಪತ್ತೆಯಾಗಿದ್ದ ಬಾಲಕಿ ಗೋರಖ್‌ಪುರದಲ್ಲಿ ಪತ್ತೆ

ದೆವರಿಯಾ ಲೈಂಗಿಕ ದೌರ್ಜನ್ಯ ಪ್ರಕರಣ: ಸಿಬಿಐ ತನಿಖೆಗೆ

Published:
Updated:

ಲಖನೌ/ಗೋರಖ್‌ಪುರ(ಪಿಟಿಐ): ದೆವರಿಯಾ ಪುನರ್ವಸತಿ ಕೇಂದ್ರದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಸರ್ಕಾರ ಸಿಬಿಐಗೊಪ್ಪಿಸಿದೆ.

ಕೇಂದ್ರದಿಂದ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳನ್ನು ಗೋರಖ್‌ಪುರದ ವೃದ್ಧಾಶ್ರಮದಿಂದ ಪತ್ತೆ ಹಚ್ಚಲಾಗಿದೆ. ಈ ವೃದ್ಧಾಶ್ರಮ ಕೂಡ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದ್ದ ಸ್ವಯಂ ಸೇವಾ ಸಂಸ್ಥೆಯ ಅಧೀನದಲ್ಲೇ ಕಾರ್ಯ ನಿರ್ವಹಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಸಂಬಂಧ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

‘ಕೆಲವು ಬಾಲಕಿಯರನ್ನು ಗೋರಖ್‌ಪುರದಲ್ಲಿರುವ ವೃದ್ಧಾಶ್ರಮಕ್ಕೆ ಕರೆದೊಯ್ಯಲಾಗಿದೆ’ ಎಂದು ದೆವರಿಯಾ ಪುನರ್ವಸತಿ ಕೇಂದ್ರದ ಬಾಲಕಿಯರು ತಿಳಿಸಿದ್ದರು.

‘ಸ್ವಯಂ ಸೇವಾ ಸಂಸ್ಥೆಯು ಹಿಂದಿನ ಸರ್ಕಾರದ ಅವಧಿಯಿಂದಲೇ ಪುನರ್ವಸತಿ ಕೇಂದ್ರವನ್ನು ನಡೆಸುತ್ತಿದೆ. ಒಟ್ಟು ಪ್ರಕರಣದ  ಕುರಿತು ಸಿಬಿಐ ತನಿಖೆ ನಡೆಯಲಿದೆ’ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.

ಕೇಂದ್ರದಿಂದ ಭಾನುವಾರ ರಾತ್ರಿ ತಪ್ಪಿಸಿಕೊಂಡಿದ್ದ 10 ವರ್ಷದ ಬಾಲಕಿ ಸ್ಥಳೀಯ ಮಹಿಳಾ ಠಾಣೆಗೆ ತೆರಳಿ, ಲೈಂಗಿಕ ದೌರ್ಜನ್ಯ ನಡೆಯುತ್ತಿರುವ ಮಾಹಿತಿ ನೀಡಿದ್ದಳು. ಅನಂತರ ಪೊಲೀಸರು ಕೇಂದ್ರದ ಮೇಲೆ ದಾಳಿ ನಡೆಸಿದ್ದರು.

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !