ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತತ್ವ ತಾಣಗಳು, ಕಲಾಕೃತಿಗಳ ಮಾಹಿತಿ ಕೋಶ ಅಭಿವೃದ್ಧಿ ಚಿಂತನೆ

Last Updated 22 ಸೆಪ್ಟೆಂಬರ್ 2019, 17:19 IST
ಅಕ್ಷರ ಗಾತ್ರ

ನವದೆಹಲಿ: ಪುರಾತತ್ವ ಸ್ಥಳಗಳು, ಪುರಾತನ ಕಲಾಕೃತಿಗಳ ಕುರಿತ ಕೇಂದ್ರೀಕೃತ ಪಾರಂಪರಿಕ ಮಾಹಿತಿ ಕೋಶವನ್ನು ಸ್ಯಾಟಲೈಟ್‌ ಮ್ಯಾಪಿಂಗ್ ಸೌಲಭ್ಯದ ನೆರವಿನಲ್ಲಿ ರೂಪಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕೇಂದ್ರ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯು (ಎಎಸ್‌ಐ) ಟಾಟಾ ಟ್ರಸ್ಟ್‌ನ ಸಹಯೋಗದಲ್ಲಿ ಡಿಜಿಟಲ್‌ ಸ್ವರೂಪದ ಇಂತಹ ಕೋಶವನ್ನು ರೂಪಿಸಲಿದೆ. ಟಾಟಾ ಟ್ರಸ್ಟ್‌ ತನ್ನ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಇದಕ್ಕೆ ಕೈಜೋಡಿಸಲಿದೆ. ಕೋಶವು ಕ್ಲೌಡ್‌ ಆಧಾರಿತ ಉನ್ನತ ಸುರಕ್ಷತೆ ಹೊಂದಿರಲಿದೆ.

ಎಎಸ್‌ಐ ಈ ಸಂಬಂಧ ಟಾಟಾ ಟ್ರಸ್ಟ್‌ ಜೊತೆಗೆ ಒಡಂಬಡಿಕೆಗೆ ಸಹಿ ಹಾಕಲಿದೆ. ಮುಂದಿನ ಹತ್ತು ವರ್ಷಗಳಲ್ಲಿ ಸ್ಯಾಟಲೈಟ್‌ ಚಿತ್ರಗಳು, ದೂರಸಂವೇದಿ ತಂತ್ರಜ್ಞಾನವನ್ನು ಬಳಸಿ ಅನಾಮಿಕವಾಗಿ ಉಳಿದಿರುವ ಪುರಾತತ್ವ ತಾಣಗಳು, ಸಂಬಂಧಿಕ ಕಲಾಕೃತಿಗಳ ಮಾಹಿತಿ ಸಂಗ್ರಹಿಸುವುದು ಇದರ ಗುರಿ.

ಮೊದಲ ಹಂತದಲ್ಲಿ ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲಿ ಇದು ಕಾರ್ಯಗತಗೊಳ್ಳಲಿದೆ. ಅಸ್ತಿತ್ವದಲ್ಲಿರುವ ಪುರಾತನ ಸ್ಥಳಗಳು, ಕಲಾಕೃತಿಗಳ ವಿವರಗಳ ಅಧಿಕ ಸುರಕ್ಷತೆಯ ಸಾಂಸ್ಕೃತಿಕ, ಪಾರಂಪರಿಕ ಮಾಹಿತಿ ಕೋಶ ರೂಪಿಸಲಾಗುತ್ತದೆ. ಸ್ಯಾಟಲೈಟ್ ಮೂಲಕ ಗುರುತಿಸಲಾಗುವ ಸ್ಥಳಗಳ ಪರಿಶೀಲನೆಯನ್ನು ಪರಿಣತ ಪುರಾತತ್ವತಜ್ಞರು ಪರಿಶೀಲಿಸಿ ಇತರೆ ಅಗತ್ಯ ಮಾಹಿತಿಗಳನ್ನು ಕಲೆಹಾಕುವರು ಎಂದು ಸಂಸ್ಕೃತಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ತರಬೇತಿನಿರತ ಪುರಾತತ್ವ ಪರಿಣತರು, ವಿದ್ಯಾರ್ಥಿಗಳ ಸಾಮರ್ಥ್ಯಾಭಿವೃದ್ಧಿ ಕಾರ್ಯಕ್ರಮ, ಉಪಗ್ರಹ ಆಧಾರಿತ ದೂರಸಂವೇದಿ ಪ್ರಯೋಗಾಲಯ ಸ್ಥಾಪನೆ, ಶೈಕ್ಷಣಿಕ ಪಠ್ಯ ರಚನೆ ಕಾರ್ಯಕ್ರಮಗಳನ್ನು ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ಪುರಾತತ್ವ ಸಂಸ್ಥೆಯಲ್ಲಿ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT