ತರೂರ್ ಪ್ರಚಾರಕ್ಕೆ ಪಟೋಲೆ ವೀಕ್ಷಕ

ಶುಕ್ರವಾರ, ಏಪ್ರಿಲ್ 26, 2019
24 °C

ತರೂರ್ ಪ್ರಚಾರಕ್ಕೆ ಪಟೋಲೆ ವೀಕ್ಷಕ

Published:
Updated:

ತಿರುವನಂತಪುರ: ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕಾರ್ಯದ ಮೇಲ್ವಿಚಾರಣೆಗೆ ಹಿರಿಯ ನಾಯಕ ನಾನಾ ಪಟೋಲೆ ಅವರನ್ನು ವೀಕ್ಷಕರಾಗಿ ಎಐಸಿಸಿ ನಿಯೋಜನೆ ಮಾಡಿದೆ. ಈ ಕ್ಷೇತ್ರದ ಹಾಲಿ ಸಂಸದ ಶಶಿ ತರೂರ್ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

‘ಕ್ಷೇತ್ರದಲ್ಲಿ ನನ್ನ ಪರ ಪ್ರಚಾರ ನಡೆಸಲು ಕಾರ್ಯಕರ್ತರೇ ಬರುತ್ತಿಲ್ಲ, ಕಾರ್ಯಕರ್ತರ ಕೊರತೆ ಕಾಡುತ್ತಿದೆ. ಪಕ್ಷದ ಸ್ಥಳೀಯ ನಾಯಕರು ಮತ್ತು ಹಾಲಿ ಶಾಸಕರು ಸಹ ಪ್ರಚಾರಕ್ಕೆ ಬರುತ್ತಿಲ್ಲ’ ಎಂದು ಶಶಿ ತರೂರ್ ಎಐಸಿಸಿಗೆ ದೂರು ನೀಡಿದ್ದರು. ಹೀಗಾಗಿ ಪಕ್ಷವು ಈ ಕ್ರಮ ತೆಗೆದುಕೊಂಡಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ತಿರುವನಂತಪುರ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಚಾರ ಕಾರ್ಯವನ್ನು ನಾನು ಬಹಳ ಹತ್ತಿರದಿಂದ ಗಮನಿಸಿದ್ದೇನೆ. ಪ್ರಚಾರ ತೃಪ್ತಿದಾಯಕ ಮಟ್ಟದಲ್ಲಿ ಇಲ್ಲ’ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್ ಹೇಳಿದ್ದಾರೆ.

ತರೂರ್ ವಿರುದ್ಧ ಬಿಜೆಪಿಯು ಕುಮ್ಮನಂ ರಾಜಶೇಖರನ್ ಅವರನ್ನು ಸ್ಪರ್ಧೆಗೆ ಇಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !