ಕೋರ್ಟ್‌ ಹೊರಗಿನ ತಪ್ಪೊಪ್ಪಿಗೆ ದುರ್ಬಲ ಪುರಾವೆ: ಸುಪ್ರೀಂ ಕೋರ್ಟ್‌

7

ಕೋರ್ಟ್‌ ಹೊರಗಿನ ತಪ್ಪೊಪ್ಪಿಗೆ ದುರ್ಬಲ ಪುರಾವೆ: ಸುಪ್ರೀಂ ಕೋರ್ಟ್‌

Published:
Updated:

ನವದೆಹಲಿ: ನ್ಯಾಯಾಲಯದ ಹೊರಗೆ ನೀಡುವ ತಪ್ಪೊಪ್ಪಿಗೆ ಹೇಳಿಕೆ ಬಹಳ ದುರ್ಬಲವಾದ ಪುರಾವೆ. ಈ ತಪ್ಪೊಪ್ಪಿಗೆ ಸ್ವಯಂಪ್ರೇರಿತ ಎಂದು ನ್ಯಾಯಾಲಯಕ್ಕೆ ಮನವರಿಕೆಯಾದರೆ ನ್ಯಾಯ ತೀರ್ಮಾನಕ್ಕೆ ಅದನ್ನು ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

ಇಂತಹ ತಪ್ಪೊಪ್ಪಿಗೆಯು ವಿಶ್ವಾಸಾರ್ಹವೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು ಮತ್ತು ಪ್ರಾಸಿಕ್ಯೂಷನ್‌ನ ಇತರ ಸಾಕ್ಷ್ಯಗಳು ಅದಕ್ಕೆ ಪೂರಕವಾಗಿವೆಯೇ ಎಂಬುದನ್ನು ನ್ಯಾಯಾಲಯವು ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಆರ್‌. ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರ ಪೀಠವು ಹೇಳಿದೆ. 

ಸ್ವಯಂಪ್ರೇರಿತ ತಪ್ಪೊಪ್ಪಿಗೆಯನ್ನು ನ್ಯಾಯತೀರ್ಮಾನಕ್ಕೆ ಆಧಾರವಾಗಿ ಇರಿಸಿಕೊಳ್ಳಬಹುದು ಎಂಬುದು ಈಗಾಗಲೇ ಸ್ಥಾಪಿತವಾಗಿರುವ ವಿಚಾರ. ಆದರೆ, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಈ ತಪ್ಪೊಪ್ಪಿಗೆಯನ್ನು ಬೇರೆ ಸಾಕ್ಷ್ಯಗಳಿಗೆ ಹೊಂದಿಸಿ ನೋಡಬೇಕು ಎಂದು ಪೀಠ ಸೂಚಿಸಿದೆ. 

ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಬ್ಯಾಂಕ್‌ನ ಮಾಜಿ ಉದ್ಯೋಗಿಯೊಬ್ಬರು ಅಪರಾಧಿ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಬ್ಯಾಂಕ್‌ನ ಹಿರಿಯ ಅಧಿಕಾರಿಗಳ ಮುಂದೆ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯ ಆಧಾರದಲ್ಲಿ ತಮ್ಮನ್ನು  ಶಿಕ್ಷೆಗೆ ಗುರಿಪ‍ಡಿಸಲಾಗಿದೆ. ಈ ತಪ್ಪೊಪ್ಪಿಗೆ ಹೇಳಿಕೆ ಸ್ವಯಂಪ್ರೇರಿತ ಎಂದು ಹೇಳಲಾಗದು ಎಂದು ಮಾಜಿ ಉದ್ಯೋಗಿ ವಾದಿಸಿದ್ದರು. 

ವಿಚಾರಣಾ ನ್ಯಾಯಾಲಯ ಮತ್ತು ಹಿಮಾಚಲ ಪ್ರದೇಶ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು. ಎರಡೂ ನ್ಯಾಯಾಲಯಗಳು ತಪ್ಪೊಪ್ಪಿಗೆ ಹೇಳಿಕೆ ಸ್ವಯಂಪ್ರೇರಿತ ಎಂದೇ ಪರಿಗಣಿಸಿವೆ. ಹಾಗಾಗಿ ಕೆಳ ನ್ಯಾಯಾಲಯಗಳ ತೀರ್ಪು ಸರಿಯಾಗಿಯೇ ಇದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು. 

ಇದನ್ನೂ ಓದಿ: ಸುಪ್ರೀಂಕೋರ್ಟ್ ಕೋರ್ಟ್‌ ನೀಡಿದ ಮಹತ್ವದ ತೀರ್ಪುಗಳಲ್ಲಿ ಇದೂ ಒಂದು

ಇದನ್ನೂ ಓದಿ: ಆಧಾರ್ ಕುರಿತು ಸುಪ್ರೀಂಕೋರ್ಟ್‌ ಹೇಳಿದ್ದೇನು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !